ನವದೆಹಲಿ:(ಜ29): ಮಾಜಿ ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡಿಸ್ ನಿಧನದ ಸುದ್ದಿ ಕೇಳಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ, ಸೇರಿದಂತೆ ಅನೇಕ ಗಣ್ಯರು ಟ್ವಿಟರ್‍ನಲ್ಲಿ ಸಂತಾಪ ಸೂಚಿಸಿದ್ದಾರೆ.

ಸರಳ ವ್ಯಕ್ತಿತ್ವವನ್ನು ಹೊಂದಿದವರು ಜಾರ್ಜ್ ಫರ್ನಾಂಡಿಸ್ ಬಡವರ ಹಾಗೂ ಕಾರ್ಮಿಕರ ಧ್ವನಿಯಾಗಿದ್ದರು. ಒಬ್ಬ ಪ್ರಮಾಣಿಕ ಹಾಗೂ ಆದರ್ಶ ನಾಯಕನನ್ನು ಕಳೆದು ಕೊಂಡಿದ್ದೇವೆ ಎಂದು ರಾಜಕೀಯ ಗಣ್ಯರು ಸಂತಾಪ ಸೂಚಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದಿದ್ದಾರೆ.