ಬೆಂಗಳೂರು(ಜುಲೈ.22) ರಾಜ್ಯದಲ್ಲಿ ಮೈತ್ರಿ ಶಾಸಕರು ರಾಜೀನಾಮೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತಯಾಚನೆ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ವಕೀಲರೊಬ್ಬರು ಸಿಎಂ ಹಾಗೂ ಸ್ಪೀಕರ್ ವಿರುದ್ಧ ಹೈಕೋರ್ಟ್ ಗೆ ದೂರು ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಇಂದೇ ಮಾಡಬೇಕು ಎಂದು ವಕೀಲರೊಬ್ಬರು ಹೈಕೋರ್ಟ್ ಗೆ ದೂರು ಸಲ್ಲಿಸಿದ್ದಾರೆ. ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ವಕೀಲ ಆನಂದ್ ಮೂರ್ತಿ ಎಂಬುವರು ವಿಶ್ವಾಸಮತ ವಿಳಂಬ ಕುರಿತು ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.