ನೀವು ಡಾಕ್ಟರ್ ಬೇಟಿ ಮಾಡಲು ಗಂಟೆಗಟ್ಟಲೇ ಕಾಯದೇ ವೇಗವಾಗಿ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆಯುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆಯೇ? ಇದಕ್ಕೆ ಸರಳ ಉತ್ತರ ಇಲ್ಲಿದೆ.
ಹೌದು ನಾವು ಮಷೀನ್ ಮೂಲಕ ಹೇಗೆ ಹಣ ಪಡೆದುಕೊಳ್ಳುತ್ತೇವೆ ಅದೇ ರೀತಿಯಲ್ಲಿ ಮಷೀನ್ ಮೂಲಕವಾಗಿ ಆರೋಗ್ಯ ತಪಾಸಣೆ ಕೂಡ ಪಡೆದುಕೊಳ್ಳಬಹುದು. ಈ ರೀತಿಯ ತಂತ್ರಜ್ಞಾನವೊಂದು ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಹಿಡಲಿದೆ. ಈ ತಂತ್ರಜ್ಞಾನದ ಹೆಸರು ಸ್ವಯಂ-ಎನಿ ಟೈಂ ಹೆಲ್ತ್ ಮಾನಿಟರಿಂಗ್ ಎಂದು. ಇದರ ಮೂಲಕ ರಕ್ತ ಪರೀಕ್ಷೆ, ಗ್ಲೂಕೋಸ್ ಪ್ರಮಾಣ, ಡೆಂಗ್ಯೂ, ಹೆಚ್‍ಐವಿ, ಟೈಫಾಯಿಡ್, ಚಿಕನ್‍ಗುನ್ಯಾ, ಮಲೇರಿಯಾ ಮುಂತಾದ ಸುಮಾರು 58 ಕ್ಕೂ ಹೆಚ್ಚಿನ ಬಗೆಯ ಖಾಯಿಲೆಗಳನ್ನು ಪತ್ತೆ ಹಚ್ಚಬಲ್ಲ ಮತ್ತು ಔಷಧಿ ಸಲಹೆಗಳನ್ನು ನೀಡಬಲ್ಲ ಸಾಮಥ್ರ್ಯವನ್ನು ಈ ಮಿಷನ್ ಹೊಂದಿದ್ದು, ಎಟಿಎಂ ಮಷೀನ್‍ಗಳ ರೀತಿಯಲ್ಲಿಯೇ ಈ ಮಷೀನ್ ಕಾರ್ಯನಿರ್ವಹಿಸಲಿದೆ. ಕಂಪ್ಯೂಟರ್ ಚಲಾವಣೆ ಮಾಡುವ ಮಾಹಿತಿ ಇದ್ದರೆ ಸಾಕು ಯಾರು ಬೇಕಾದರೂ ಈ ಮಷೀನ್‍ನಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬಹುದಾಗಿದೆ.

ಒಂದು ಹೆಮ್ಮೆಯ ವಿಚಾರವೆಂದರೆ ಈ ಸ್ವಯಂ ಮಷೀನ್ ಆವಿಷ್ಕಾರವಾದದ್ದು ಭಾರತದಲ್ಲಿ ಈ ಸ್ವಯಂ ಚಾಲಿತ ಮಷೀನ್‍ಗೆ ಉತ್ತಮ ಮನ್ನಣೆ ದೊರೆದಿದ್ದು, ಭಾರತದ ವಿವಿಧ ರಾಜ್ಯಗಳಲ್ಲಿ ಈ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚಿದೆ ಎಂದು ತಯಾರಕರಾದ ಸನ್‍ಸ್ಕ್ರಿಟೆಕ್ ಸಂಸ್ಥೆಯ ಅಭಿಪ್ರಾಯ. ಇದನ್ನು ಕಾರ್ಪೋರೇಟ್ ಆಫೀಸ್, ಪಾರ್ಮಸಿ, ಶಾಪಿಂಗ್ ಮಾಲ್, ವಿಮಾನ ನಿಲ್ದಾಣ ಸೇರದಂತೆ ಹಲವೆಡೆ ಸ್ಥಾಪಿಸಬಹುದಾಗಿದೆ.

ಈ ಸ್ವಯಂ ಮಷೀನ್ ಹೇಗೆ ಕಾರ್ಯನಿರ್ವಹಿಸಲಿದೆ ಎಂದರೆ ಮೊದಲ ಬಾರಿಗೆ ಈ ಮಷೀನ್‍ನ ಸೇವೆ ಪಡೆದುಕೊಳ್ಳುವವರು ತಮ್ಮ ಹೆಸರು, ಹುಟ್ಟಿದ ದಿನಾಂಕ ಹಾಗೂ ಇತರೆ ಕೆಲವು ಮಾಹಿತಿಗಳನ್ನು ದಾಖಲಿಸಬೇಕಾಗುತ್ತದೆ. ಜೊತೆಗೆ ಬೆರಳಚ್ಚು ಹಾಗೂ ಭಾವಚಿತ್ರ ಲಗತ್ತಿಸುವ ಸೌಲಭ್ಯ ಕೂಡ ಈ ಮಷೀನ್ ಒಳಗೊಂಡಿದೆ. ಒಮ್ಮೆ ನಿಮ್ಮ ವಿವರಗಳನ್ನು ಈ ಮಷೀನ್‍ನಲ್ಲಿ ದಾಖಲಿಸಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಒನ್ ಟೈಂ ಪಾಸ್‍ವರ್ಡ್ ರವಾನೆಯಾಗುತ್ತದೆ. ಆ ಪಾಸ್‍ವರ್ಡ್ ದಾಖಲಿಸಿದ ಬಳಿಕ ನಿಮಗೆ ಆಯ್ಕೆಗಳು ಸಿಗುತ್ತವೆ.
1) ಆರೋಗ್ಯ ತಪಾಸಣೆ:- ಎಲ್ಲಾ ಆರೋಗ್ಯ ತಪಾಸಣೆಯ ಮಾಹಿತಿ ಸಿಗುತ್ತದೆ. ತಪಾಸಣಾ ವರದಿಯನ್ನು ಪಿಡಿಎಫ್ ಮೂಲಕ, ಇಮೇಲ್ ಮೂಲಕ ಇದರ ಪ್ರತಿಯನ್ನು ಪಡೆಯಬಹುದಾಗಿದೆ.
2) ಡಾಕ್ಟರ್ ಸಂಪರ್ಕ:- ಈ ಆಯ್ಕೆಯಲ್ಲಿ ವೆಬ್ ಕ್ಯಾಮೆರಾ ಮೂಲಕ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಹಾಗೂ ಔಷಧಿ ವಿವರಗಳನ್ನು ಪಡೆಯಬಹುದು. ಈ ವರದಿ ನಿಮ್ಮ ಹೆಸರಿನಲ್ಲಿ ಸದಾ ಉಳಿದಿರುತ್ತದೆ.
3) ಆರೋಗ್ಯದ ಕುರಿತು ಹಳೆಯ ಮಾಹಿತಿ:- ನೀವು ಈ ಮೊದಲು ಸೇವೆಯನ್ನು ಪಡೆದುಕೊಂಡಿದ್ದರೆ ಎಲ್ಲಾ ಮಾಹಿತಿಗಳು ದೊರೆಯುತ್ತದೆ. ಬಳಕೆದಾರರು ಅವರ ಆರೋಗ್ಯ ತಪಾಸಣೆಯ ಮಾಹಿತಿಯನ್ನು ಹಾಗೂ ಜೊತೆಗೆ ನಿಮ್ಮ ಲ್ಯಾಬ್ ಟೆಸ್ಟ್ ಮಾಹಿತಿಯನ್ನು ಪೆನ್‍ಡ್ರೈ ಮೂಲಕ ಈ ಮಷೀನ್‍ನಲ್ಲಿ ಸಂಗ್ರಹಿಸಿ ಇಡಬಹುದಾಗಿದೆ.
ಈ ಮಷೀನ್ ಆವಿಷ್ಕಾರ ಆರೋಗ್ಯ ಕ್ಷೇತ್ರದಲ್ಲಿ ಒಂದು ಉತ್ತಮ ಅಚ್ಚರಿಯ ಆವಿಷ್ಕಾರ ಎಂದರೆ ತಪ್ಪಾಗಲಾರದು.