ಬೆಂಗಳೂರು:(ಫೆ18): ಏರ್ ಶೋ ರಿಹರ್ಸಲ್ ವೇಳೆ 2 ಯುದ್ಧ ವಿಮಾನಗಳು ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ರಿಹರ್ಸಲ್ ವೇಳೆ ಘಟನೆ ಸಂಭವಿಸಿದ್ದು, ಪೈಲಟ್‍ಗಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಎರಡು ಸೂರ್ಯ ಕಿರಣ ಜಟ್ ವಿಮಾನಗಳು ತಾಲೀಮು ನಡೆಸುವ ವೇಳೆ ಪರಸ್ಪರ ಎರಡು ವಿಮಾನಗಳು ಡಿಕ್ಕಿ ಹೊಡೆದಿವೆ. ಇನ್ನು ಡಿಕ್ಕಿ ಹೊಡೆದ 2 ಸೂರ್ಯ ಕಿರಣ ಜಟ್ ವಿಮಾನಗಳೂ ಹೊತ್ತಿ ಉರಿದಿವೆ.

ಬೆಂಗಳೂರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಏರ್ ಶೋ ಚಾಲನೆಗೆ ಒಂದೇ ದಿನ ಬಾಕಿಯಿರುವಾಗ ಈ ಘಟನೆ ನಡೆದಿದೆ. ಅದೃಷ್ಟಾವಶತ್ ಪೈಲೆಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಪೈಲೆಟ್‍ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ವೇಳೆ ವಿಮಾನಗಳÀ ಅವಶೇಷಗಳು ಮನೆ ಮೇಲೆ ಬಿದ್ದು ಬೆಂಕಿ ಹೊತ್ತಿ ಉರಿದಿದೆ ಎನ್ನಲಾಗುತ್ತಿದ್ದು, ಘಟನೆ ಸಂಭವಿಸುವ ವೇಳೆ ವಿಮಾನ ಡಿಕ್ಕಿಯಾಗಿ ಬ್ಲಾಸ್ಟ್ ಆದ ಸೌಂಡ್‍ಗೆ ಸ್ಥಳೀಯರೊಮ್ಮೆ ಭಯಭೀತರಾಗಿದ್ದಾರೆ.