ಬೆಂಗಳೂರು(ಆಗಸ್ಟ್.17) ರಾಜ್ಯ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತನ್ನ ಸರ್ಕಾರ ರಚನೆಗೆ ಮುಂದಾಗಿದೆ. ಮೈತ್ರಿ ಸರ್ಕಾರದ ಜನಪ್ರಿಯ ಯಾವ ಯೋಜನೆಗಳನ್ನು ರದ್ದು ಮಾಡುವುದಿಲ್ಲ ಎಂದು ಸಿಎಂ ಬಿ.ಎಸ್‌ ಯಡಿಯೂರಪ್ಪನವರು ಸ್ಪಷ್ಟನೆ ನೀಡಿದ್ದಾರೆ.

ಇಂದು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು, ಯೋಜನೆಗಳು ಮುಂದವರಿಯಲು ಬೇಕಾದ ಹಣ ಬಿಡುಗಡೆಗೆ ಫೈಲ್​ ಸಹಿ ಮಾಡಿದ್ದೇನೆ ಎಂದು ಹೇಳಿದ್ದು, ಇನ್ನು ಯೋಜನೆಗಳ ಹಣ ಬಿಡುಗಡೆಗೆ ಸಹಿ ಮಾಡಿದ್ದೇನೆ ಅಂತ ಅವರು ಹೇಳಿದರು.

ಕಿಸಾನ್‌ ಸಮ್ಮಾನ್‌ ಯೋಜನೆಗೆ ಹಣ ಹೊಂದಿಸಲು ‘ಅನ್ನಭಾಗ್ಯ’ ಸೇರಿದಂತೆ ಹಲವು ಜನ ಕಲ್ಯಾಣ ಯೋಜನೆಗಳ ಅನುದಾನ ಕಡಿತ ಮಾಡಲು ಬಿಎಸ್‌ವೈ ನೇತೃತ್ವದ ಸರಕಾರ ಮುಂದಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಕಾಂಗ್ರೆಸ್‌ ಸರ್ಕಾರ ವ್ಯಾಪಕ ಟೀಕೆಯನ್ನು ಮಾಡುತ್ತಿರುವುದು ಸರಿಯಲ್ಲ, ನಾವು ಜನಪರ ಯೋಜನೆಗಳು ಯಾವುದನ್ನೂ ರದ್ದುಗೊಳಿಸುವುದಿಲ್ಲ ಜನಪರ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ.