ಬೆಂಗಳೂರು(ಜೂನ್.11) ರಾಜ್ಯದ ಯಾದಗಿರಿ ಜಿಲ್ಲೆಯ ರೈತರ ಖಾತೆಯ ಹಣವನ್ನು ವಾಪಾಸ್ಸು ಪಡೆದ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಚರ್ಚೆಯನ್ನು ನಡೆಸಿ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ. ಬ್ಯಾಂಕ್ ನವರೇ ತಪ್ಪು ನಮ್ಮದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮಾಧ್ಯಮದವರು ಸುಮ್ಮಸುಮ್ಮನೆ ತಪ್ಪು ಸರ್ಕಾರದ್ದವರದೇ ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ ಎಂದು ಮಾಧ್ಯಮದ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಸುಮ್ಮನೆ ಸುದ್ದಿ ಮಾಡುವುದರಿಂದ ನಿಮಗೇನು ಲಾಭ? ಎಂದು ಪ್ರಶ್ನಿಸಿದ್ದಾರೆ. ಯಾದಗಿರಿಯಲ್ಲಿ ಕೇವಲ 200 ರೈತರಿಗೆ ಸಮಸ್ಯೆಯಾಗಿಲ್ಲ, 800 ಕ್ಕೂ ಹೆಚ್ಚು ರೈತರಿಗೆ ಸಮಸ್ಯೆಯಾಗಿದೆ. 13200 ರೈತರ ಖಾತೆಯಿಂದ ಹಣ ವಾಪಸ್ ಆಗಿದೆ. ಇದು ಕೇಂದ್ರ ಸರ್ಕಾರ ಸ್ವಾಮ್ಯದ ಬ್ಯಾಂಕ್ ಗಳ ತಪ್ಪು. ನಮ್ಮ ಸರ್ಕಾರ ರೈತರ ವಿಚಾರದಲ್ಲಿ ತಪ್ಪು ಮಾಡಿಲ್ಲ. ಸುಮ್ಮನೆ ಸುದ್ದಿ ಮಾಡುವುದರಿಂದ ನಿಮಗೇನು ಲಾಭ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮದವರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.