ಬೆಂಗಳೂರು(ಮಾ:21): ಮಂಡ್ಯ ಕಾಂಗ್ರೆಸ್ ಬೆಂಬಲಿಗರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ವಾಭಿಮಾನ ಕಳೆದುಕೊಂಡು ಯಾರ ಮುಂದೆಯೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯದಲ್ಲಿ ಕೆಲ ಕಾಂಗ್ರೆಸ್ ಬೆಂಬಲಿಗರು ತುಂಬಾ ಮುಂದುವರೆದಿದ್ದಾರೆ. ಕೆಲವರು ಹಿಂಬಾಗಿಲಿನಿಂದ ಬಹಳ ಮುಂದುವರೆದಿದ್ದು,ಅಂಥವರ ಮುಂದೆ ಭಿಕ್ಷೆ ಬೇಡುವುದಿಲ್ಲ,ನನಗೆ ನನ್ನ ಕಾರ್ಯಕರ್ತರೇ ಸಾಕು,ಅವರು ಚುನಾವಣೆಯನ್ನು ಎದುರಿಸಲು ಸಮರ್ಥರಾಗಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನನಗೆ ಬೆನ್ನಿಗೆ ಚೂರಿ ಹಾಕುವವರು ಬೇಕಾಗಿಲ್ಲ,ಮೂಲ ಕಾಂಗ್ರೆಸಿಗರು ನಿಖಿಲ್ ಕುಮಾರಸ್ವಾಮಿಗೆ ಆಶೀರ್ವಾದ ಮಾಡಿದ್ದಾರೆ,ಮೈತ್ರಿ ಒಪ್ಪಂದದಂತೆ ನಮಗೆ ಸಂಪೂರ್ಣ ಬೆಂಬಲ ದೊರೆತಿದೆ,ಕಾಂಗ್ರೆಸ್-ಜೆಡಿಎಸ್ ನಲ್ಲಿ ಯಾವ ಒಡಕು ಸಹ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.