ಶ್ರೀನಗರ:(ಫೆ27): ಪಾಕ್‍ನ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿ ನಾಶಗೊಳಿಸಿದ ಬೆನ್ನಲಿಯೆ ಭಾರತ ಹಾಗೂ ಪಾಕ್ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂದು ಪಾಕ್‍ನ ಯುದ್ಧ ವಿಮಾನ ಗಡಿ ರೇಖೆಯನ್ನು ಉಲ್ಲಂಘಿಸಿ ಭಾರತದೊಳಗೆ ನುಸುಳಿದ ವೇಳೆ ಭಾರತೀಯ ವಾಯುಸೇನೆ ಪಾಕ್ ಯುದ್ಧ ವಿಮಾನವನ್ನು ಉಡೀಸ್ ಮಾಡಿದೆ. ಇನ್ನು ಕಾಶ್ಮೀರದ ಬದ್ಗಾಮ್‍ನಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಜೆಟ್ ವಿಮಾನ ಪತನಗೊಂಡಿದ್ದರಿಂದ ಐದು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ಇರುವ ಕಾರಣ ತಾತ್ಕಾಲಿಕವಾಗಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲರ್‍ಗಳಿಂದ ಸೂಚನೆಯನ್ನು ಪಡೆದು ನಾಗರಿಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತ ಪಾಕ್ ಉಗ್ರರ ನೆಲೆಗಳನ್ನು ಸಂಪೂರ್ಣ ಸೆದೆಬಡಿದು, ಪುಲ್ವಾಮ ದಾಳಿಯ ಪ್ರತಿಕಾರವನ್ನು ತೀರಿಸಿಕೊಂಡು ಭಾರತೀಯ ಸೇನೆಯ ಪವರ್ ತೋರಿಸಿ ಬಿಟ್ಟಿದೆ. ಇದೀಗ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉದ್ಭವಿಸಿದ್ದು, ದೇಶದಾದ್ಯಂತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.