ಅಹಮದಾಬಾದ್(ಜ:೦೧): ಹಾಜರಿ ಹಾಕುವಾಗ ಮಕ್ಕಳು ಎಸ್ ಸರ್ ಬದಲು ಜೈ ಹಿಂದ್ ಅಥವಾ ಜೈ ಭಾರತ್ ಎಂದು ಕೂಗುವುದು ಕಡ್ಡಾಯ ಎಂದು ಗುಜರಾತ್ ಶಿಕ್ಷಣ ಇಲಾಖೆ ತಿಳಿಸಿದೆ.

ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಈ ಕ್ರಮ ಜರುಗಿಸಲಾಗಿದೆ , ಈ ನೂತನ ನಿಯಮ ಮಂಗಳವಾರದಿಂದಲೇ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಭೂಪೇಂದ್ರ ಸಿಂಹ ಚೌದಾಸಮ ತಿಳಿಸಿದ್ದಾರೆ.

ಜಿಲ್ಲಾ ಶಿಕ್ಷಣ ಅಧಿಕಾರಿಗಳು ಈ ಆದೇಶ ಪಾಲನೆಯಾಗುತ್ತಿರುವುದು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.