ಮಂಡ್ಯ(ಜುಲೈ.27) ಕೋಳಿಯೊಂದು ತನ್ನ ಕುತ್ತಿಗೆ ಭಾಗದಲ್ಲಿ ಮೊಟ್ಟೆ ಇಡುವ ಮೂಲಕ ಜನರಲ್ಲಿ ಅಚ್ಚರಿಯನ್ನು ಮೂಡಿಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದಿದೆ.

ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೀತಾನೇ ಇರುತ್ತವೆ, ಮನುಷ್ಯನಿಗೆ ಹಿಂದಿನ ಜನ್ಮದ ರಹಸ್ಯ ನೆನಪಿಗೆ ಬರೋದು, ನಾಯಿ ಬೆಕ್ಕಿನ ಮರಿ ಹಾಲು ಕುಡಿಸುವುದು, ಇನ್ನು ವಿಚಿತ್ರ ಘಟನೆಗಳು ನಮ್ಮ ನಡುವೆಯೇ ನಡೆಯುತ್ತಲೆ ಇರುತ್ತವೆ, ಈಗ ಅಂತದ್ದೆ ಒಂದು ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ, ಕೋಳಿಯೊಂದು ಮೊಟ್ಟೆಯನ್ನು ತನ್ನ ಕುತ್ತಿಗೆ ಭಾಗದಿಂದ ಇಡುವ ಮೂಲಕ ಅಚ್ಚರಿ ಮೂಡಿಸಿದೆ.

ನಾಗಮಂಗಲ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಾಲಜ್ಞಾನಿ ಪುಸ್ತಕ ಬರೆಯುವುದರಲ್ಲಿ ಹೆಸರುವಾಸಿಯಾದ ಬರಹಗಾರ ರಾಮೇಗೌಡ ರವರ ಮನೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.ಸುಮಾರು ಎರಡು ವರ್ಷದಿಂದ ಶಿವರಾಮೇಗೌಡ ತಮ್ಮ ಮನೇಲಿ ಈ ಕೋಳಿಯನ್ನು ಸಾಕಿದ್ದಾರೆ.

ಹಲವು ಬಾರಿ ಈ ಕೋಳಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ಮಾಡಿತ್ತು. ಆದರೆ ನಿನ್ನೆ ಕುತ್ತಿಗೆ ಭಾಗದಿಂದ ಮೊಟ್ಟೆ ಇಡುವುದನ್ನು ನೋಡಿದ ಮನೆಯವರು ಆಶ್ಚರ್ಯ ಪಟ್ಟಿದ್ದಾರೆ. ನಂತರ ಅದರ ವಿಡಿಯೋ ಮಾಡಿದ್ದಾರೆ. ಶಿವರಾಮೇಗೌಡರ ಮನೆಯಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ