ಬೆಂಗಳೂರು(ಜೂನ್.12) ಇಸ್ರೋದ ಮಹತ್ವಕಾಂಕ್ಷಿಯ ಯೋಜನೆ, ಚಂದ್ರಯಾನ-2 ಯೋಜನೆಯ ಭಾಗವಾಗಿರುವ ಆರ್ಬಿಟಿಸ್, ಲ್ಯಾಂಡರ್, ರೋವರ್ ಗಳು ಉಡಾವಣೆಗೆ ಸಿದ್ದವಾಗಿದೆ.

ಬೆಂಗಳೂರು ನಗರದ ಮಾರತಹಳ್ಳಿಯಲ್ಲಿರುವ ಇಸ್ರೋ ಕೇಂದ್ರದಲ್ಲಿ ಈ ಮೂರು ಸಾಧನಗಳನ್ನು ಬುಧವಾರ ಮಾಧ್ಯಮದವರಿಗೆ ಇದೇ ಮೊದಲ ಬಾರಿಗೆ ಪ್ರದರ್ಶನ ಮಾಡಲಾಯಿತು.

ಚಂದ್ರಯಾನ-2 ಯೋಜನೆಯಂತೆ ಜುಲೈ 9-16ರ ನಡುವೆ ಭೂಸ್ಥಿರ ಉಡಾವಣಾ ವಾಹಕವು ಈ ಸಾಧನಗಳನ್ನು ಹೊತ್ತು ನಭಕ್ಕೆ ತೆರಳಲಿದೆ. ಸೆಪ್ಟೆಂಬರ್ ವೇಳೆಗೆ ಆರ್ಬಿಟಸ್ ಚಂದ್ರನ ಆವರಣವನ್ನು ತಲುಪಲಿದೆ.