ಬೆಂಗಳೂರು:(ಜ14): ಜೇಕಬ್ ವರ್ಗೀಸ್ ಆ್ಯಕ್ಚನ್‍ಕಟ್‍ನ, ನಿರ್ದೇಶಕ ನಂದೀಶ್ ಕಥೆ ಬರೆದಿರುವ, ಹಾಗೂ ನಿನಾಸಂ ಸತೀಶ್ ನಾಯಕ ನಟನಾಗಿ ನಟಿಸಿರುವ “ಚಂಬಲ್” ಚಿತ್ರ ಫೆಬ್ರವರಿ 15 ರಂದು ತೆರೆ ಕಾಣುತ್ತಿದೆ.

ಈ ಚಿತ್ರದಲ್ಲಿ ನಾಯಕಿಯಾಗಿ ಸೋನು ಗೌಡ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಾಲ್ಪನಿಕ ಕತೆ ಹೆಚ್ಚಿರದೆ ನೈಜಕತೆಯನ್ನಾಧರಿಸಿದೆ ಎನ್ನಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜನರನ್ನು ಸೆಳೆಯುವಂತೆ ಮಾಡಿದೆ.

ಶರತ್ ಚಕ್ರವರ್ತಿ ಈ ಚಿತ್ರಕ್ಕೆ ಸಂಭಾಷಣೆ ನೀಡಿದ್ದು, ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಸಿಂಪಲ್ ಸುನಿ ಸಾಹಿತ್ಯ ಬರೆದಿದ್ದಾರೆ. ಒಟ್ಟಿನಲ್ಲಿ ಚಿತ್ರವು ತೆರೆ ಕಾಣಲು ಕೆಲವೇ ದಿನಗಳು ಬಾಕಿಯಿವೆ.