ನವದೆಹಲಿ(ಜ:09): ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು,ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಲಿದೆ.

ಸಂಸತ್ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಸಭೆಯಲ್ಲಿ ಬಜೆಟ್ ಅಧಿವೇಶನದ ನಿರ್ಣಯ ಮಾಡಲಿದ್ದು,ಈ ಅಧಿವೇಶನ ಫೆಬ್ರವರಿ 13ರ ವರೆಗೆ ನಡೆಯಲಿದೆ.

ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಯಲಿರುವ ಕೊನೆಯ ಅಧಿವೇಶನ ಹಾಗೂ ಮಂಡನೆ ಇದಾಗಿದೆ.