ಹುಬ್ಬಳ್ಳಿ:(ಜೂನ್.07): ಹಳೇ ಹುಬ್ಬಳ್ಳಿಯ ಶರಾವತಿನಗರದ ನಿವಾಸಿಯಾದ ಪೃಥ್ವಿರಾಜ ಕಪ್ಪಣಸ್ವಾಮಿ ನಾರಾಯಣಕರ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹಣ ದೋಚಿಸಿದ್ದಾನೆ.

ನಾವು ಎಸ್.ಬಿ.ಐ. ಬ್ಯಾಂಕ್‍ನವರು ನಿಮ್ಮ ಎಸ್.ಬಿ.ಐ ಖಾತೆಗೆ ಪಾಯಿಂಟ್ ಬಂದಿದೆ ಎಂದು ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಕ್ರೆಡಿಟ್ ಕಾರ್ಡ್‍ನಿಂದ 19,300 ಹಾಗೂ ಡೆಬಿಟ್ ಕಾರ್ಡ್‍ನಿಂದ 17,300 ರೂ ವನ್ನು ಡ್ರಾ ಮಾಡಿದ್ದಾರೆಂದು ತಿಳಿದು ಬಂದಿದೆ.

ಈ ಪ್ರಕರಣವು ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.