ಹುಬ್ಬಳ್ಳಿ(ಮಾ:22): ಕುಂದಗೋಳ ಶಾಸಕ ಕರ್ನಾಟಕ ರಾಜ್ಯ ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಕುಂದಗೋಳ ಕ್ಷೇತ್ರದಿಂದ ಸುಮಾರು ಮೂರು ಬಾರಿ ವಿಧಾನಸಭೆ ಗೆ ಆಯ್ಕೆಯಾಗಿದ್ದರು.ಒಮ್ಮೆ ಪಕ್ಷೇತರರಾಗಿ ಕೂಡ ಆಯ್ಕೆಯಾಗಿದ್ದರು.

ಕೆಲವು ದಿನಗಳ ಹಿಂದೆ ಆರೋಗ್ಯ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಪೌರಾಡಳಿತ ಸಚಿವರಾಗಿ ಆಯ್ಕೆಯಾಗಿದ್ದರು.ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.