ನವದೆಹಲಿ:(ಫೆ01): ಮೋದಿ ಸರ್ಕಾರದ ಕೊನೆಯ ಬಜೆಟ್ ಮದ್ಯಮ ವರ್ಗದವರಿಗೆ ಬಂಪರ್ ಕೊಡುಗೆ. ತೆರಿಗೆದಾರರಿಗೆ ಸಿಹಿಸುದ್ದಿಕೊಟ್ಟ ಮೋದಿ ಸರ್ಕಾರ. 7 ಲಕ್ಷ ವಾರ್ಷಿಕ ವೇತನವಿರುವವರು ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ.

ಪಶುಪಾಲನೆ ಮೀನುಗಾರಿಕೆಗೆ 750 ಕೋಟಿ ಅನುದಾನ ನೀಡಲಾಗಿದೆ. ಹೈನುಗಾರಿಕೆಗೆ ಉತ್ತೇಜನೆ

ರೈತರಿಗೆ ಪ್ರಧಾನಮಂತ್ರಿ “ಕಿಸಾಸ್ ಸಮ್ಮಾನ್ ಯೋಜನೆ” ಅಡಿ ವರ್ಷಕ್ಕೆ 6000 ರೂ. 03 ಕಂತುಗಳಲ್ಲಿ ರೈತರ ಖಾತೆಗೆ 2000 ರೂ ಹಣದ ವರ್ಗಾವಣೆ.

ರೈತರಿಗೆ ಉತ್ತಮ ಬೀಜದ ವಿತರಣೆ, ಜಾನುವಾರು ಸಾಕಾಣಿಕೆಗೆ ನೆರವು ಪಶುಪಾಲನೆ ಮೀನುಗಾರಿಕೆಗೆ ನೆರವು

ಬೀದಿ ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಆಯುಷ್ ಮಾನ್ ಯೋಜನೆಯಡಿ ಆರೋಗದ ನೆರವು ಜೊತೆಗೆ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೆಯೇ ಪಿಂಚಣಿ ಯೋಜನೆ

ಪ್ರಧಾನ ಮಂತ್ರಿ “ಶ್ರಮ್‍ದನ್ ಯೋಗಿ ಮಾನ್ ದನ್” ಯೋಜನೆ ಜಾರಿ, ಇದಕ್ಕೆ 500 ಕೋಟಿ ರೂ ಇಡಲಾಗಿದೆ.

ಅಲೆಮಾರಿ ಜನಾಂಗಗಳಿಗೆ ಪ್ರತ್ಯೇಕ ಮಂಡಳಿ ರಚನೆ

ಮಹಿಳೆಯರ ಅಭಿವೃದ್ಧಿಗೆ ಒತ್ತು.

ಕೆಲಸದ ಸಮಯದಲ್ಲಿ ಕಾರ್ಮಿಕರು ಮೃತಪಟ್ಟರೆ 6 ಲಕ್ಷ ಪರಿಹಾರ

ಗ್ರಾಮೀಣ ಭಾಗದಲ್ಲಿ 08 ಕೋಟಿ ಉಚಿತ ಎಲ್‍ಪಿಜಿ ಸಂಪರ್ಕ

ಗರ್ಭಿಣಿಯರಿಗೆ “ಮಾತೃ ವಂದನೆ ಯೋಜನೆ”

ರಕ್ಷಣಾ ಕ್ಷೇತ್ರಕ್ಕೆ ಒತ್ತು ರಕ್ಷಣಾ ಬಜೆಟ್‍ಗೆ ಮೂರು ಕೋಟಿ ಹೆಚ್ಚಳ

ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ನಿರ್ಮಾಣ

“ಸಾಗರ ಮಾಲ ಯೋಜನೆಯ” ಮೂಲಕ ಜಲ ಸಾರಿಗೆಗೆ ಒತ್ತು

“ಉಡಾನ್ ಯೋಜನೆಯ” ಮೂಲಕ ಸಾಮಾನ್ಯ ಜನರಿಗೆ ವಿಮಾನಯಾನ ಸೌಲಭ್ಯ

ಮೇಕಿನ್ ಇಂಡಿಯಾ ಅಡಿ 12 ಲಕ್ಷ ಯುವಕರಿಗೆ ಉದ್ಯೋಗ
ಇದರಡಿಯಲ್ಲಿ ಮೊಬೈಲ್ ತಯಾರಿಕೆ, ತೆರಿಗೆ ಪಾವತಿಗೆ 24 ಗಂಟೆಗಳ ಕಾಲ ಆನ್‍ಲೈನ್ ಸೇವೆ.

ಅಂಗನವಾಡಿ ಆಶಾ ಕಾರ್ಯಕರ್ತರಿಗೆ ಗೌರವಧನ ಶೇಕಡಾ 50 ರಷ್ಟು ಹೆಚ್ಚಳ.

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲಕ್ಕೆ ಶೇಕಡಾ ಎರಡರಷ್ಟು ಬಡ್ಡಿದರ.

ಆದಾಯ ತೆರಿಗೆಯನ್ನು ಮಿತಿಗೊಳಿಸಿದ ಸರ್ಕಾರ, ಇದರಿಂದ ತೆರಿಗೆದಾರರಿಗೆ ಬಂಪರ್ ಕೊಡುಗೆ.