ಬೆಂಗಳೂರು(ಜೂನ್.06) ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲಾಗಿದೆ.

ಸಂಪುಟ ಸಭೆಯಲ್ಲಿ ಕುಮಾರಸ್ವಾಮಿಯವರ ದೋಸ್ತಿ ಸರ್ಕಾರ, ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ರಾಜ್ಯದಲ್ಲಿ ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿಯ ರಜೆಯ ರದ್ದು ವಿಚಾರವಾಗಿ ಸಂಪುಟ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಗಿದೆ.

ಪ್ರತಿ ತಿಂಗಳಿನ ನಾಲ್ಕನೇ ಶನಿವಾರ ರಾಜ್ಯ ಸರ್ಕಾರಿ ನೌಕರರಿಗೆ ರಜೆ ನೀಡಲು ಸರ್ಕಾರ ಸಮ್ಮತಿಯನ್ನು ನೀಡಿದೆ. ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿಗೆ ರಜೆ ಮುಂದುವರಿಸಲು ಸಮ್ಮತಿಯನ್ನು ನೀಡಿದ್ದು, ಸರ್ಕಾರಿ ರಜೆ ಆದೇಶ ಪತ್ರಕ್ಕೆ ಸಹಿ ಹಾಕುವುದು ಮಾತ್ರ ಬಾಕಿ ಉಳಿದಿದೆ