ಬೆಂಗಳೂರು:(ಫೆ08): ಕುಮಾರಸ್ವಾಮಿ ಸರ್ಕಾರ ಈ ಸಾರಿಯ ಬಜೆಟ್‍ನಲ್ಲಿ ರೈತರಿಗೆ ಬಂಪರ್ ಕೊಡುಗೆಯನ್ನು ಕೊಟ್ಟಿದೆ. ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಪರಿಚಯಿಸಲು ಹೊರಟ್ಟಿದ್ದು, 145 ಕೋಟಿ ಅನುದಾನವನ್ನು ನೀಡಲಾಗಿದೆ.

ಕೃಷಿ ಮತ್ತು ಕೃಷಿ ಸಂಬಂಧಿತ ಇತರÀ ಯೋಜನೆಗಳಿಗೆ 46,850 ಕೋಟಿ ರೂ ಅನುದಾನ ನೀಡಲಾಗಿದೆ ಜೊತೆಗೆ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತನ್ನು ನೀಡುವುದ್ದು, ಹಾಗೆಯೇ ಸಾವಯವ ಕೃಷಿಗೆ 35 ಕೋಟಿ ರೂ ಅನುದಾನ ನೀಡಲಾಗಿದೆ.

ರೈತ ಸಿರಿ ಯೋಜನೆ ಜಾರಿ ಇದರ ಅಡಿ ಪ್ರತಿ ಹೆಕ್ಟೆರ್‍ಗೆ ರೈತರಿಗೆ 10 ಸಾವಿರ ರೂ ನಗದು ವರ್ಗಾವಣೆ ಮಾಡಲಾಗುವುದು ಇದಕ್ಕೆ 10 ಕೋಟಿ ಅನುದಾನವನ್ನು ನೀಡಲಾಗಿದೆ. ಜೇನು ಕೃಷಿಗೆ 05 ಕೋಟಿ ಅನುದಾನ, ರೈತರ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿಯೂ ವಿದ್ಯುತ್ ಸರಬರಾಜು ಮಾಡಲು ಸರ್ಕಾರ ನಿರ್ಧಾರ.

ಪ್ರತ್ಯೇಕ ಬೆಳೆವಿಮೆ ಯೋಜನೆಯ ಜಾರಿಗೆ ಪರಿಶೀಲನೆ ನಡೆಸಲಾಗುವುದು, ಕೃಷಿ ಪ್ರಾತ್ಯೇಕ್ಷಿಕಾ ಕೇಂದದÀ್ರ ಸ್ಥಾಪನೆ, ಶೂನ್ಯ ಬಂಡವಾಳ ಕೃಷಿಗೆ 40 ಕೋಟಿ ರೂ ಅನುದಾನ, ಮಿಡಿ ಸೌತೆ ಬೆಳೆಯುವ ರೈತರ ಅನುಕೂಲಕ್ಕೆ 06 ಕೋಟಿ ಅನುದಾನ ನೀಡಲಾಗಿದ್ದು, ಒಟ್ಟಾರೆ ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಸರ್ಕಾರ ಈ ಸಾರಿ ರೈತರಿಗೆ ಬಂಪರ್ ಕೊಡುಗೆ ನೀಡಿದೆ.