ಬೆಂಗಳೂರು(ಮೇ:30): ಲೋಕಸಭಾ ಚುನಾವಣೆಯಲ್ಲಿ ದೇಶ ಮತ್ತು ರಾಜ್ಯದಲ್ಲಿ ಬಹುಮತ ಸಾಧಿಸಿದ ಬಿಜೆಪಿಯು ಕೇಂದ್ರದಲ್ಲಿ ಸಚಿವ ಸಂಪುಟ ರಚಿಸಲು ಮುಂದಾಗಿದೆ. ರಾಜ್ಯದ ಸಂಸದ ಸದಾನಂದಗೌಡರಿಗೆ ಕೇಂದ್ರ ಸಚಿವ ಸ್ಥಾನಕ್ಕೆ ಅವಕಾಶ ನೀಡಿರುವುದು ರಾಜ್ಯದ ಜನತೆ ಮತ್ತು ರಾಜ್ಯ ಬಿಜೆಪಿಗೆ ಸಂತಸ ತಂದಿದೆ.

ಈ ಹಿನ್ನೆಲೆ ಸಂಭಾವ್ಯ ಸಚಿವ ಡಿ.ವಿ ಸದಾನಂದಗೌಡರು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪನವರ ಆಶೀವಾರ್ದ ಪಡೆಯಲು ಭೇಟಿಯಾದ ಸಂದರ್ಭದಲ್ಲಿ ಯಡಿಯೂರಪ್ಪನವರು ಷರತ್ತುಗಳನ್ನು ವಿಧಿಸಿದ್ದಾರೆ.

ನೀವು ದೆಹಲಿಯಲ್ಲಿ ದಿವಂಗತ ಅನಂತಕುಮಾರ್ ಅವರ ಸ್ಥಾನವನ್ನು ತುಂಬಬೇಕು. ಅವರ ರೀತಿಯಲ್ಲೆ ಜನತೆ ಪರವಾದ ಕೆಲಸವನ್ನು ಮಾಡಬೇಕು. ರಾಜ್ಯದ ಜನರಿಗೆ ದೆಹಲಿಯಲ್ಲಿ ಸ್ಪಂದಿಸಬೇಕು ಮತ್ತು ಜನಪರತೆಯನ್ನು ಉಳಿಸಿಕೊಂಡು ಜನನಾಯಕರಾಗಿರಬೇಕು ಎಂಬ ಪ್ರೀತಿ ಷರತ್ತುಗಳನ್ನು ವಿಧಿಸಿ ಡಿವಿ ಸದಾನಂದಗೌಡರಿಗೆ ಆಶೀರ್ವಾದ ಮಾಡಿದ್ದಾರೆ. ಆಶೀರ್ವಾದ ಪಡೆದುಕೊಂಡ ಸದಾನಂದಗೌಡರು ಸಂತಸದಿಂದ ಷರತ್ತುಗಳನ್ನು ಒಪ್ಪಿಕೊಂಡಿದ್ದಾರೆ.