ವಾಷಿಂಗ್ಟನ್(ಜ.11): ವಿಶ್ವದ ನಂ 1 ಶ್ರೀಮಂತ ಹಾಗೂ ಅಮೆಜಾನ್ ಸಂಸ್ಥೆಯ ಸ್ಥಾಪಕ ಜೆಫ್ ಬೆಜೋಸನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಮ್ಯಾಕೆನ್ಜಿಗೆ ಅವರು ವಿಚ್ಛೇದನ ನೀಡಿದ್ದು, ಈ ಮೂಲಕ 25 ವರ್ಷಗಳ ದಾಂಪತ್ಯಕ್ಕೆ ತೆರೆ ಬಿದ್ದಿದೆ.

ಮ್ಯಾಕೆನ್ಜಿ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಾವು ಗೆಳೆಯಾರಿಗುತ್ತೇವೆ ಎಂದು ಜೆಫ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.

ಫೊಬ್ರ್ಸ ನೀಡುವ ವಿಶ್ವದ ಶ್ರೀಮಂತರ ಸಾಲಿನಲ್ಲಿ ಜೆಫ್ ಮೊದಲಿದ್ದು, ಬರೋಬ್ಬರಿ 9.64 ಲಕ್ಷ ಕೋಟಿ ರೂಪಾಯಿ ಅಸ್ತಿ ಹೊಂದಿದ್ದಾರೆ.

ಅಮೆಜಾನ್ ಸಂಸ್ಥೆ ಆರಂಭಕ್ಕೂ ಮೊದಲೇ ಮ್ಯಾಕೆನ್ಜಿ ಅವರನ್ನು ಜೆಫ್ ವಿವಾಹ ಆಗಿದ್ದರು. ಹಾಗಾಗಿ ಮ್ಯಾಕೆನ್ಜಿಗೆ ಎಷ್ಟು ಜೀವನಾಂಶ ಸಿಗಲಿದೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.