ಕಾಬುಲ್(ಜ:17): ಕಾಬೂಲ್ ನ ಹೆಸರಾಂತ ಗ್ರೀನ್ ವಿಲೇಜ್ ಬಳಿ ತಡ ರಾತ್ರಿ ಸುಮಾರು 7 ಗಂಟೆಗೆ ಬಾಂಬ್ ಸ್ಫೋಟಿಸಲಾಗಿದೆ. ವಿದೇಶಿಯರೂ ಸೇರಿ ಹಲವಾರು ಜನ ನೆಲೆಸಿರುವ ಈ ಜಾಗದಲ್ಲಿ ದುರ್ಘಟನೆ ನಡೆದಿದೆ ಎಂದು ವಕ್ತಾರ ನಜುಬ್ ದನಿಷ್ ತಿಳಿಸಿದ್ದಾರೆ.

ಈ ಸ್ಫೋಟದಿಂದಾಗಿ ನಾಲ್ವರು ಮೃತಪಟ್ಟಿದ್ದು,10 ಮಕ್ಕಳು ಸೇರಿ 44 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ದಾಳಿ ನಡೆಸಿದವರ ಸುಳಿವಿಗಾಗಿ ಭದ್ರತಾ ಪಡೆ ಹುಡುಕಾಟ ನಡೆಸುತ್ತಿದೆ,ದಾಳಿ ನಡೆದ ಸ್ಥಳದಲ್ಲಿ ಪರಿಸ್ಥಿತಿ ಮಿತಿಮೀರದಂತೆ ನಿಯಂತ್ರಣ ಮಾಡಲಾಗಿದೆ,ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆಗಳು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದೆ.