ಶಿವಮೊಗ್ಗ(ಜೂನ್.03) ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯ್ತಿಯಲ್ಲಿ 12 ವಾರ್ಡ್‍ಗಳಿಗೆ ಚುನಾವಣೆಯನ್ನು ನಡೆಸಲಾಗಿದೆ.

ಪಟ್ಟಣ ಪಂಚಾಯ್ತಿಯ 12 ವಾರ್ಡ್‍ಗಳ ಪೈಕಿ ಬಿಜೆಪಿ 6 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ 4 ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ 1 ಮತ್ತು ಪಕ್ಷೇತರ 1 ಸ್ಥಾನದಲ್ಲಿ ಜಯಗಳಿಸಿದೆ.

ಈ ಹಿಂದೆ ಸೊರಬ ಪಟ್ಟಣ ಪಂಚಾಯ್ತಿ ಜೆಡಿಎಸ್ ಮತ್ತು ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಸಂಸದರು ಮತ್ತು ಶಾಸಕರ ಮತವನ್ನು ಪಡೆದು ಬಿಜೆಪಿ ಅಧಿಕಾರವನ್ನು ಹಿಂಪಡೆಯಲಿದೆ. ಶಾಸಕ ಕುಮಾರ ಬಂಗಾರಪ್ಪನವರಿಗೆ ಮುನ್ನಡೆಯಾಗಿದ್ದು ಸೋದರ ಮಧು ಬಂಗಾರಪ್ಪನವರಿಗೆ ಹಿನ್ನಡೆಯಾಗಿದೆ.