ನವದೆಹಲಿ(ಫೆ.06): ಸುಪ್ರೀಂ ಕೊರ್ಟ್‍ನ ಆದೇಶದಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖಕ್ಕೆ ಮೊಟ್ಟೆ ಚಲ್ಲಿದಾಂತಗಿದೆ ಎಂದು ಕೇಂದ್ರ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಟೀಕಿಸಿದ್ದಾರೆ.

ಸಿಬಿಐ ಮತ್ತು ಪಶ್ಚಿಮ ಬಂಗಾಳ ಸರಕಾರದ ತಿಕ್ಕಾಟದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೊರ್ಟ್, ಕೊಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಸಿಬಿಐ ತನಿಖೆಗೆ ಸಹಕರಿಸಬೇಕು ಹಾಗೂ ಈ ಸಂಬಂಧ ಫೆಬ್ರುವರಿ 20 ರಂದು ಶಿಲ್ಲಾಂಗ್ ನಲ್ಲಿ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಸೂಚನೆ ನೀಡಿದೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸ್ಮೃತಿ ಇರಾನಿ, ಈ ದೇಶದಲ್ಲಿ ಎಲ್ಲರೂ ಸಾಮಾನ್ಯ ಜನರು ಅಷ್ಟೆ, ಯಾರೂ ಇಲ್ಲಿ ಬಾಸ್ ಅಲ್ಲ. ಈ ದೇಶಕ್ಕೆ ಪ್ರಜಾಪ್ರಭುತ್ವ ಎಂಬುದು ಎಲ್ಲರಿಗೂ ಬಿಗ್ ಬಾಸ್ . ಇದು ನಮ್ಮ ವಿಜಯವಲ್ಲ ಸಂವಿಧಾನದ ವಿಜಯವಾಗಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಾತಾವರಣ ಸೂಕ್ತವಾಗಿಲ್ಲ. ಸುಪ್ರೀಂ ನೀಡಿರುವ ಆದೇಶವನ್ನು ಮಮತಾ ತಲೆಯಲ್ಲಿಟ್ಟುಕೊಂಡು ರಾಜೀವ್ ಅವರಿಗೆ ಸಿಬಿಐ ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಬೇಕು ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಪ್ರತಿಭಟನೆಯಿಂದ ಕಳೆದ ಮೂರು ದಿನಗಳಿಂದ ಕೋಲ್ಕತ್ತಾ, ದೇಶದ ರಾಜಧಾನಿಯಾಗಿ ಮಾರ್ಪಟ್ಟಿದೆ. ಹೋರಾಟವನ್ನು ನಾವು ನಿಲ್ಲಿಸುವುದಿಲ್ಲ. ಇದನ್ನು ದೆಹಲಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಮಮತಾ ಹೇಳಿದ್ದರು. ಕೆಲವು ತಿಂಗಳಿನಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರದ ನಡುವೆ ಘರ್ಷನೆ ನಡೆಯುತ್ತಿದೆ. ಕಳೆದ ವರ್ಷ ಬಿಜೆಪಿಯ ರಥಾಯಾತ್ರೆ ವಿರುದ್ಧ ಮಮತಾ ಹೋರಾಟ ನಡೆಸಿದ್ದರು ಎಂದು ಹೇಳಿದ್ದಾರೆ.

ಶಾರದಾ ಚಿಂಟ್ ಫಂಡ್ ಮತ್ತು ರೋಸ್ ವ್ಯಾಲಿ ಪಾಂಝಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ಮನೆಗೆ ತೆರಳಿದ್ದರು ಇದಕ್ಕೆ ಗರಂ ಆದ ಮಮತಾ ಕೇಂದ್ರದ ವಿರುದ್ಧ ಧರಣಿ ನಡೆಸಿ, ಮೋದಿ ತೂಲಗಿಸಿ ದೇಶ ಉಳಿಸಿ ಎಂಬ ಆಂದೋಲನಕ್ಕೆ ಕರೆ ಕೊಟ್ಟಿದ್ದರು.

ಇನ್ನು ಪಶ್ಚಿಮ ಬಂಗಾಳದ ದೀದಿ ಹೋರಾಟಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಚಂದ್ರಬಾಬು ನಾಯ್ಡು, ಅರವಿಂದ ಕೇಜ್ರಿವಾಲ್, ಅಖಿಲೇಶ್ ಯಾದವ್ ಸೇರಿದಂತೆ ಇನ್ನು ಮುಂತಾದ ವಿರೋಧ ಪಕ್ಷದ ನಾಯಕರು ಬೆಂಬಲ ಸೂಚಿಸಿದ್ದರು.

ಒಟ್ಟಾರೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರದ ನಡುವಿನ ವಾಕ್ಸಮರಕ್ಕೆ ಸುಪ್ರೀಂ ಸದ್ಯಕ್ಕೆ ಬ್ರೇಕ್ ಹಾಕಿದ್ದು ಕಮಿಷನರ್ ರಾಜೀವ್ ಕುಮಾರ್ ತನಿಖೆ ಭಾರೀ ಕುತೂಹಲ ಮೂಡಿಸಿದೆ.