ಮೊನ್ನೆ ರಾಹುಲ್ ಗಾಂಧಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಟೆಕ್ಕಿಗಳ ಜೊತೆ ಸಂವಾದ ಏರ್ಪಡಿಸಿದ್ದು ಆ ಸಂದರ್ಭದಲ್ಲಿ ನಡೆದ ಗಲಭೆ ಬಿಜೆಪಿ ಪ್ರಾಯೋಜಿತ ವಾಗಿದೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಶಾಂತಿಯುತವಾಗಿ ನಡೆಯಬೇಕಿದ್ದ ಸಭೆಗೆ ಬಿಜೆಪಿಯ ಕಾರ್ಯಕರ್ತರು ಟೆಕ್ಕಿಗಳ ವೇಷದಲ್ಲಿ ಬಂದು ಮೋದಿ ಪರ ಘೋಷಣೆ ಕೂಗಿದ್ದಾರೆ.ಟೆಕ್ಕಿಗಳು ಕಚೇರಿಗೆ ಹೋಗುವಾಗ ಘೋಷಣೆಯ ಬೋರ್ಡ್ ಗಳು ಹಾಗೂ ಫ್ಲೆಕ್ಸ್ ಗಳನ್ನು ಹಿಡಿದು ಹೋಗುತ್ತಾರ ಎಂದು ಪ್ರಶ್ನಿಸಿದ್ದಾರೆ.ಮೋದಿ ಬಂದಾಗಲೆಲ್ಲ ನಮ್ಮ ಕಾರ್ಯಕರ್ತರು ಮೋದಿ ವಿರುದ್ಧ ಘೋಷಣೆ ಕೂಗಬಹುದು,ಆದರೆ ಎಲ್ಲರಿಗೂ ಮಾತನಾಡುವ ಸ್ವಾತಂತ್ರವಿದೆ.ಅದನ್ನು ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು ಎಂದರು.ಹಾಗೆಯೇ ಇಂತಹ ದುಷ್ಕೃತ್ಯಗಳಲ್ಲಿ ತೊಡಗುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ