ಬೆಂಗಳೂರು ( ಜ.24): ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದರಿಂದ ಬಿಜೆಪಿಗೆ ಭಯ ಶುರುವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ಪ್ರಿಯಾಂಕ ರಾಜಕೀಯಕ್ಕೆ ಬಂದಿರುವುದು ಇಡೀ ದೇಶಕ್ಕೆ ಶಕ್ತಿ ಬಂದಂತಾಗಿದೆ. ಕಳೆದ ಹಲವು ತಿಂಗಳಿಂದ ರಾಹುಲ್ ಗಾಂಧಿ ಸೈನಿಕನಂತೆ ಪಕ್ಷಕ್ಕಾಗಿ ದುಡಿಯುತ್ತಿದ್ದು, ರಾಹುಲ್ ಗಾಂಧಿ ಕೈಗಳಿಗೆ ಇನ್ನಷ್ಟು ಬಲ ನೀಡಲಾಗುವುದು ಎಂದಿದ್ದಾರೆ.

ಕೆಲವು ಪಕ್ಷಗಳಿಗೆ ಕುಟುಂಬವೇ ಮುಖ್ಯವಾಗಿರುತ್ತದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ವೇಣುಗೋಪಾಲ್, ರಾಹುಲ್ ಕುಟುಂಬದ ಬಗ್ಗೆ ನಮಗೆಲ್ಲ ಹೆಮ್ಮೆಯಿದೆ. ಅವರ ಕುಟುಂಬ ದೇಶಕ್ಕೆ ಕೊಡುಗೆ ನೀಡಿದೆ ಹಾಗಾದ್ರೆ ಬಿಜೆಪಿ ನಮ್ಮ ದೇಶಕ್ಕೆ ಏನು ಕೊಡುಗೆ ಕೊಟ್ಟಿದೆ ಎಂದು ಪ್ರಶ್ನಿಸಿದ್ದಾರೆ.