ನವದೆಹಲಿ(ಮಾ:18): ಲೋಕಸಭಾ ಚುನಾವಣೆಗೆ ವಿವಿಧ ಸಂಸ್ಥೆಗಳು ಸಮೀಕ್ಷೆಗಳನ್ನು,ಜನಾಭಿಪ್ರಾಯಗಳನ್ನು ಸಂಗ್ರಹಿಸಿ ನೀಡುತ್ತಿವೆ,ಈ ಮದ್ಯೆ ಚುನಾವಣೆಯ ಸಂದರ್ಭದಲ್ಲಿ ಬೆಟ್ಟಿಂಗ್ ಬಜಾರ್ ನಲ್ಲಿ ಹಿಂದಿ ಭಾಷಿಕ ರಾಜ್ಯಗಳ ಬೆಟ್ಟಿಂಗ್ ಪ್ರಭಾವ ಹೆಚ್ಚಾಗಿದೆ.

ರಾಜಸ್ತಾನದ ಬೆಟ್ಟಿಂಗ್ ಬಜಾರಿನಿಂದ ಬಂದ ಮಾಹಿತಿಯ ಪ್ರಕಾರ ಬಿಜೆಪಿ ಗೆ 250 ಸ್ಥಾನಗಳು ಲಭಿಸಲಿವೆ. ರಾಜಸ್ತಾನದಲ್ಲಿ 25 ಸ್ಥಾನಗಳ ಪೈಕಿ ಬಿಜೆಪಿಗೆ 18ರಿಂದ 20 ಸ್ಥಾನಗಳು ಸಿಗಲಿವೆ ಎಂದು ಬೆಟ್ಟಿಂಗ್ ಮಾರುಕಟ್ಟೆ ಯ ಮೂಲಗಳಿಂದ ತಿಳಿದುಬಂದಿದೆ.

ಬಾಲಕೋಟ್ ದಾಳಿಯಿಂದ ಬಿಜೆಪಿಗೆ ಲಾಭವಾಗಲಿದೆ,ಪ್ರಧಾನಮಂತ್ರಿಯಾಗಲು ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.