ನವದೆಹಲಿ(ಜ.12): ಅಧಿಕೃತ ಮಾಹಿತಿ ಪ್ರಕಾರ 2018 ರಲ್ಲಿ ದೆಹಲಿ ಮೆಟ್ರೋದಲ್ಲಿ 497 ಪಿಕ್ ಪ್ಯಾಕೆಟ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಶೇ 94 ರಷ್ಟು ಮಹಿಳೆಯರನ್ನು ಬಳಸಿಕೊಂಡು ಪಿಕ್ ಪ್ಯಾಕೆಟ್‍ಗಳನ್ನು ಮಾಡಲಾಗುತ್ತದೆ ಎಂಬುದು ಅಚ್ಚರಿಯ ವಿಷಯವಾಗಿದೆ.

2017 ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾದ ಮೇಲೆ ಮೆಟ್ರೋದಲ್ಲಿ ಭದ್ರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಶಂಕಿತರನ್ನು ಗುರುತಿಸಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿ ಪಿಕ್ ಪ್ಯಾಕೆಟರ್ಸ ನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ನಿರ್ಧರಿಸಿತ್ತು. ಇನ್ನು ಮೇಟ್ರೋ ಆವರಣದಲ್ಲಿ ಸಂಶಯಾಸ್ಪದರ ಪ್ರವೇಶವನ್ನು ನಿಲ್ಲಿಸಲು ಹೆಚ್ಚಿನ ಸಿ.ಸಿ.ಟಿ.ವಿ ಕ್ಯಾಮಾರಗಳನ್ನು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

2017 ರಲ್ಲಿ 1,292 ಮಹಿಳೆಯರು ಮತ್ತು 100 ಪುರುಷರನ್ನು ಪೊಲೀಸರು ಹಿಡಿದಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಇನ್ನು 2018 ರಲ್ಲಿ 470 ಮಹಿಳೆಯರನ್ನು ಮತ್ತು 28 ಪುರುಷರನ್ನು ಬಂಧಿಸಲಾಗಿದೆ. ಸಾಮನ್ಯವಾಗಿ ಈ ಪಿಕ್ ಪ್ಯಾಕೆಟ್ ಮಾಡುವವರು ಮಗುವನ್ನು ಹಿಡಿದುಕೊಂಡಿರುತ್ತಾರೆ ಮತ್ತು ಗುಂಪುಗಳಲ್ಲಿ ಪ್ರಯಾಣಿಸುತ್ತಾರೆ ಎಂದು ಸಿಐಎಸ್ ಎಫ್ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮನ್ಯವಾಗಿ ಅವರು ನಗದು, ಲ್ಯಾಪ್ ಟಾಪ್, ವಿದೇಶಿ ಕರೆನ್ಸಿ, ಚಿನ್ನ ಮತ್ತು ಕ್ಯಾಮರಾಗಳನ್ನು ಕದಿಯುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.