ಬೆಂಗಳೂರು(ಜ:09): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳ ಕಾಲ ನಡೆದ ಭಾರತ್ ಬಂದ್ ಅಂತ್ಯವಾಗಿದೆ. ಇಂದು ಮಧ್ಯಾಹ್ನ 2 ಘಂಟೆಯಿಂದ ಸರ್ಕಾರಿ ಬಸ್ ಸಂಚಾರ ಶುರುಮಾಡಿದ್ದು,ಎಂದಿನಂತೆ ಜನ ತಮ್ಮ ತಮ್ಮ ಸ್ಥಳಗಳಿಗೆ ಹೊರಟಿದ್ದಾರೆ.

ಇದಲ್ಲದೇ ರಾಜ್ಯದ ಹಲವೆಡೆ ಬಂದ್ ನ ಬಿಸಿ ಅಷ್ಟೇನು ಕಂಡುಬರದಿದ್ದರೂ ಕೆಲವು ಸಂಘಗಳು ಮಾತ್ರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ತಮ್ಮ ಮನವಿಗಳನ್ನು ಸಲ್ಲಿಸಿದ್ದಾರೆ.