ಬೆಂಗಳೂರು:(ಫೆ05): ಇಂದು ಸಂಜೆ ಬಿಜೆಪಿಯ ಕಛೇರಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವ ಸಲುವಾಗಿ ಕೋರ್ ಕಮಿಟಿ ಸಭೆಯನ್ನು ನಡೆಸಲಾಗುತ್ತಿದೆ. ಭಾರತ್ ಕೆ ಮನ್ ಕಿ ಬಾತ್ ಮೋದಿ ಕೆ ಸಾಥ್ ಹೆಸರಿನಲ್ಲಿ ನಡೆಯುವ ಮಹತ್ವದ ಸಭೆಯಾಗಿರುತ್ತದೆ.

ಬಿಜೆಪಿಯ ರಾಜಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಭಾರತ್ ಕೆ ಮನ್ ಕಿ ಬಾತ್ ಮೋದಿ ಕೆ ಸಾಥ್ ಎಂಬ ಯೋಜನೆಯ ಮೂಲಕ ಒಂದು ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಸಂಕಲ್ಪ ಪತ್ರದ ತಯಾರಿಕೆಗಾಗಿ ದೇಶದ ಹತ್ತು ಕೋಟಿ ಜನರಿಂದ ಸಲಹೆ ಪಡೆಯಲಾಗುತ್ತದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಲೋಕಸಭಾ ಚುನಾವಣೆಗೆ ಬಿಜೆಪಿ ನಾಯಕರು ಯಾವ ರೀತಿ ತಯಾರಿ ನಡೆಸ ಬೇಕೆಂಬ ವಿಚಾರವನ್ನು ನಾಯಕರಿಗೆ ಮನದಟ್ಟು ಮಾಡಲು ಈ ಸಭೆ ನಡೆಸಲಾಗುತ್ತದೆ ಎನ್ನಲಾಗಿದೆ.