ಕಿವಿ ಹಣ್ಣನ್ನು ಚೀನಾ ದೇಶದ ಪ್ರಜಾತಂತ್ರವು ರಾಷ್ಟ್ರೀಯ ಹಣ್ಣು ಎಂದು ಅಂಗೀಕರಿಸಲಾಗಿದೆ. ಚೀನಾದ ಯಾಂಗ್‍ತ್ಸೆ ನದಿಯ ಪರ್ವತ ಪ್ರದೇಶಗಳಲ್ಲಿ ಬೆಳೆಯುವುದರ ಜೊತೆಗೆ ಸಿಚೌನ್ ಸೇರಿದಂತೆ ಇತರ ಪ್ರದೇಶದಲ್ಲಿಯೂ ಬೆಳೆಯಲಾಗುತ್ತದೆ.

ಇದು ಮಿಟಮಿನ್ ಇ ಮತ್ತು ಎ ಅಂಶವನ್ನು ಹೊಂದಿದೆ. ಕಿವಿ ಹಣ್ಣಿನ ಬೀಜದ ಎಣ್ಣೆ ಸರಾಸರಿ 62% ಆಲ್ಫಾಲಿಲೋಲೆನಿಕ್ ಆಮ್ಲಗಳನ್ನು ಹೊಂದಿದೆ. ಡೆಂಘ್ಯೂ ಜ್ವರ ಇದ್ದವರು ಪ್ರತಿದಿನ ಈ ಹಣ್ಣನ್ನು ತಿನ್ನುವುದರಿಂದ ರಕ್ತಕಣವನ್ನು ಹೆಚ್ಚು ಮಾಡುತ್ತದೆ.

ಈ ಹಣ್ಣಿನಲ್ಲಿ ಹೃದಯಕ್ಕೆ ಬೇಕಾದ ಇ ಜೀವಸತ್ವವಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಗರ್ಭಿಣಿಯರು ಈ ಹಣ್ಣು ತಿನ್ನುವುದರಿಂದ ಗರ್ಭಸ್ಥ ಶಿಶುವಿಗೆ ರಕ್ಷ ನೀಡುತ್ತದೆ. ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುದನ್ನು ತಡೆಯುತ್ತದೆ.ಜೀವಕೋಶಗಳಲ್ಲಿ ಡಿಎನ್‍ಎ ಹಾನಿಯನ್ನು ತಡೆಯುತ್ತದೆ. ಈ ರೀತಿ ಕಿವಿ ಹಣ್ಣಿನಲ್ಲಿ ಆರೋಗ್ಯಕ್ಕೆ ಒಳಿತಾಗುವ ಅನೇಕ ಗುಣವಿದೆ.