(ಜುಲೈ.16) ಖಾಲಿ ಹೊಟ್ಟೆಯಲ್ಲಿ ನೀವು ಯಾವತ್ತಾದರೂ ಮೊಳಕೆ ಕಾಳುಗಳನ್ನು ತಿಂದಿದ್ದೀರಾ?
ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ವಿಚಾರವನ್ನು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ. ಸಾಕಷ್ಟು ಪ್ರಯೋಜನಗಳನ್ನು ಹೊಂದಿದ ಮೊಳಕೆ ಕಾಳುಗಳನ್ನು ಬೆಳಗ್ಗಿನ ಸಮಯದಲ್ಲಿ ಸೇವಿಸಬೇಕು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.

ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಾಲುಗಳನ್ನು ತಿನ್ನುವುದು ರಕ್ತ ಪರಿಚಲನೆಗೆ ಹೇಳಿ ಮಾಡಿಸಿದ ಆಹಾರ. ಮೊಳಕೆ ಕಾಳುಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಮೊಳಕೆ ಕಾಳು ದೇಹಕ್ಕೆ ಅವಶ್ಯಕವಿರುವ ಕೆಂಪು ರಕ್ತಕಣಗಳನ್ನು ಉತ್ಪತ್ತಿ ಮಾಡುತ್ತದೆ.

ಡಯಟ್ ಮಾಡುವವರು ಕಡ್ಡಾಯವಾಗಿ ಮೊಳಕೆ ಕಾಳುಗಳನ್ನು ತಿನ್ನಲೇಬೇಕು. ಏಕೆಂದರೆ ಇದರಲ್ಲಿರುವ ಫೈಬರ್ ನ ಅಂಶ ಹೊಟ್ಟೆ ತುಂಬುವಂತೆ ಮಾಡುತ್ತದೆ. ಹೊಟ್ಟೆ ತುಂಬುವ ಕಾರಣ ಆಗಾಗ ತಿನ್ನಬೇಕಾಗುವುದಿಲ್ಲ! ಆಗ ನ್ಯಾಚುರಲ್ ಆಗಿ ನಿಮ್ಮ ತೂಕ ಕಡಿಮೆಯಾಗುತ್ತದೆ.

ಮೊಳಕೆ ಕಾಳುಗಳಲ್ಲಿ ಅಗಾಧ ಪ್ರಮಾಣದ ವಿಟಮಿನ್ ಸಿ ಇರುವ ಕಾರಣ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇನ್ನು ಎಸಿಡಿಟಿ ಸಮಸ್ಯೆ ಇರುವವರು ತಪ್ಪದೇ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನಲೇಬೇಕು. ಯಾಕೆಂದರೆ ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆ ಸುಗಮವಾಗಿ ಸಾಗುತ್ತದೆ.