ಪ್ರಾವಿಡೆನ್ಸ್(ಗಯಾನ):(ನ12): ಮಹಿಳಾ ಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್ ಮಾಡುವ ಮೊದಲೇ ಟೀಂ ಇಂಡಿಯಾದ ಮಹಿಳಾ ಆಟಗಾರ್ತಿಯರು 10 ರನ್‍ಗಳನ್ನು ಗಳಿಸಿದ್ದರು.

ಪಾಕಿಸ್ತಾನದ ಆಟಗಾರ್ತಿಯರ ಅಶಿಸ್ತಿನ ಆಟದಿಂದ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸುವ ಮೊದಲೇ 10-0 ಸ್ಕೋರ್ ಕಾರ್ಡ್ ಮೂಲಕ ಮೈದಾನಕ್ಕೆ ಪ್ರವೇಶಿಸಿದರು.

ಪಾಕಿಸ್ತಾನ ಆಟಗಾರ್ತಿಯರು ರನ್ ಕದಿಯುವ ಬರದಲ್ಲಿ ಅಪಾಯಕಾರಿಯಾಗಿ ಓಡಿದ್ದರು. ಈ ಬಗ್ಗೆ ಎಚ್ಚರ ನೀಡಿದ್ದರು ಮತ್ತೆರಡು ಬಾರಿ ಅದೇ ವರ್ತನೆಯನ್ನು ಮುಂದುವರೆಸಿದ ಕಾರಣ ಪ್ರತಿ ತಪ್ಪಿಗೆ ಐದು ರನ್‍ಗಳಂತೆ ಒಟ್ಟು 10 ರನ್‍ಗಳನ್ನು ಟೀಂ ಇಂಡಿಯಾದ ಕೈ ಸೇರಿದೆ.