ಬೆಂಗಳೂರು(ಜೂ.03): ಆನ್ ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಎಚ್ಚರವಾಗಿರಿ. ಪ್ರತಿಷ್ಟಿತ ಹೋಟೆಲ್ ಹೆಸ್ರಲ್ಲಿ ನಿಮ್ಮ ಹೊಟ್ಟೆ ಸೇರ್ತಿದೆ ಕಳೆಪೆ ಆಹಾರ.

ಹೌದು ಇವತ್ತು ಡೆಲಿವರಿ ಬಾಯ್ ಕರ್ಮಕಾಂಡ ಬಯಲಾಗಿದೆ. ಮಹೇಂದ್ರ ಕುಮಾರ್ ಎಂಬುವರು 802 ಬಿಲ್ ಕೊಟ್ಟು ಫುಡ್ ಆರ್ಡರ್ ಮಾಡಿದ್ದರು.ಆದರೆ ಅರ್ಡರ್ ಮಾಡಿದ್ದೆ ಒಂದುದು , ಡೆಲಿವರಿ ಆಗಿದ್ದೇ ಮತ್ತೊಂದು. ಆರ್ಡರ್ ಮಾಡಿದ ಐಟಂ ಬದಲಿಗೆ ಬಿರಿಯಾನಿ ರೈಸ್, ಕಬಾಬ್ ಬಂದಿದೆ.

ಅಹಾರ ಡೆಲಿವರಿ ಆಗೋ ಸ್ಥಳಕ್ಕೆ ಗ್ರಾಹಕರು ತೆರಳಿದಾಗ ಬಿಚ್ಚಿ ಬಿದ್ದಿದ್ದಾರೆ. ಪ್ರತಿಷ್ಟಿತ ಹೋಟೆಲ್ ಹೆಸರಿನಲ್ಲಿ ಜನರನ್ನು ಯಾಮರಿಸುತ್ತಿರುವದು ಗೊತ್ತಾಗಿದೆ. ಸಣ್ಣ ಕೋಣೆಯೊಂದ್ರಲ್ಲಿ ಆಹಾರವನ್ನು ರೆಡಿ ಆಗುತ್ತಿದ್ದು, ಪ್ರತಿಷ್ಟಿತ ಹೊಟೇಲ್ ಹೆಸರಿನಲ್ಲಿ ಪಾರ್ಸೆಲ್ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿದೆ.

ಈ ಕುರಿತು ಗ್ರಾಹಕ ಮಹೇಂದ್ರ ಕುಮಾರ್ ದೂರು ದಾಖಲಿಸಿದ್ದಾರೆ.