ಬೆಂಗಳೂರು(ಆ:30): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆ ವಿಭಾಗದಲ್ಲಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಬಿಬಿಎಂಪಿ ಘನತಾಜ್ಯ ವಿಭಾಗದ ಅಡಿಯಲ್ಲಿ 4000 ಪೌರಕಾರ್ಮಿಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ 4000 ಹುದ್ದೆಗಳು ಗ್ರೂಪ್ ಡಿ ಪೌರಕಾರ್ಮಿಕ ಹುದ್ದೆಗಳಾಗಿವೆ. ಬಿಬಿಎಂಪಿ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ ಅಳವಡಿಸಲಾಗುವುದು. 4000 ಹುದ್ದೆಗಳಿಗೆ ಸೆಪ್ಟೆಂಬರ್ 9 ರಿಂದ ಅಕ್ಟೋಬರ್ 9 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 9 ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನವಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿರುವುದಿಲ್ಲ. ಕನ್ನಡ ಭಾಷೆ ಮಾತನಾಡಬೇಕು. ಕನ್ನಡ ಜ್ಞಾನದ ಬಗ್ಗೆ ಸ್ವಯಂ ಘೋಷಣೆ ಪತ್ರ ಸಲ್ಲಿಸಬೇಕು. 45 ವರ್ಷ ವಯೋಮಿತಿ ಮೀರಿರಬಾರದು. ಚುನಾವಣೆ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಜನ್ಮದಿನಾಂಕದ ದಾಖಲೆ ಪತ್ರವನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಹೊಂದಿರಬೇಕು. ಸರ್ಕಾರದ ನಿಯಮಾನುಸಾರ ಹುದ್ದೆಗಳನ್ನು ಜಾತಿ ಮೀಸಲಾತಿ ಅಡಿಯಲ್ಲಿ ಭರ್ತಿ ಮಾಡಲಾಗುವುದು. ಮೀಸಲಾತಿ ಕೋರ ಬಯಸುವ ಅಭ್ಯರ್ಥಿಗಳು ನಿಗದಿತ ಪ್ರಮಾಣ ಪತ್ರಗಳನ್ನು ಹೊಂದಿರಬೇಕು. ಜಾತಿ ಮೀಸಲಾತಿ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ಹೊಂದಿರಬೇಕು ಎಂದು ಹೇಳಲಾಗಿದೆ.