ಬೆಂಗಳೂರು(ಮೇ.30) ಇಂದು ಬೆಂಗಳೂರಿನಲ್ಲಿ ನಡೆದ ಪಾಲಿಕೆಯ ಮಾಸಿಕ ಸಭೆಯಲ್ಲಿ ಸದಸ್ಯರೆಲ್ಲರೂ ಮೋದಿ ಮುಖವಾಡ ಧರಿಸಿ ಮೋದಿ ಮೋದಿ ಎಂದು ಘೋಷಣೆ ಕೂಗುವುದರ ಮೂಲಕ ಸಂಭ್ರಮಿಸಿದರು, ಈ ವೇಳೆ ಮಾತನಾಡಿದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಇಂದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಮತ್ತೊಮ್ಮ ಪ್ರಮಾಣವಚನ ಮಾಡಲಿದ್ದಾರೆ. ಆದ್ದರಿಂದ ನಾವೆಲ್ಲಾ ಮೋದಿಯವರ ಮುಖವಾಡವನ್ನು ಧರಿಸುವುದರ ಮೂಲಕ ಸಭೆಯಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.

ನಂತರದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಇಡೀ ದೇಶದಲ್ಲಿ ಬಿಜೆಪಿ ಮತ್ತು ಎನ್‍ಡಿಎ ಸರ್ಕಾರ 354 ಸ್ಥಾನ ಗೆಲ್ಲುವ ಮೂಲಕ ಬಹುಮತವನ್ನು ಸಾಧಿಸಿದೆ ಇದಕ್ಕೆ ನರೇಂದ್ರ ಮೋದಿಯವರೇ ಕಾರಣ, ಪುಲ್ವಾಮಾದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಮೋದಿಯವರ ಬಿಜೆಪಿ ಸರ್ಕಾರವೇ ಕಾರಣ. ಇದರ ಪ್ರತಿಫಲವೇ ಲೋಕಸಭೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನವನ್ನು ಗೆಲ್ಲಲು ಕಾರಣವಾಯಿತು ಎಂದು ಹೇಳಿದರು.

ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶವನ್ನು ವ್ಯಕ್ತಪಡಿಸಿದರು, ಸರ್ಜಿಕಲ್ ಸ್ಟ್ರೈಕ್ ಭಾರತೀಯ ಸೇನೆ ಮಾಡಿರೋದು, ಈ ಹಿಂದೆ ಕಾಂಗ್ರೆಂಸ್ ಸರ್ಕಾರವಿದ್ದಾಗಲೂ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ ಎಂದು ಹೇಳಿದರು, ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ನಾರಾಯಣಸ್ವಾಮಿ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಇನ್ನಿತರರು ಭಾಗಿಯಾಗಿದ್ದರು.