ಕಾಶ್ಮೀರ:(ಫೆ27): ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‍ನಲ್ಲಿ ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲೆಟ್‍ಗಳು ಸಾವನ್ನಪ್ಪಿದ್ದಾರೆ.

ಮಿಗ್ 21 ಯುದ್ಧ ವಿಮಾನ ಬುದ್ಗಾಮ್‍ನಲ್ಲಿ ಗಸ್ತು ತಿರುಗುವ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ಕಾರಣ ತಾಂತ್ರಿಕ ದೋಷ ಇದದ್ದರಿಂದ ಯುದ್ಧ ವಿಮಾನ ಪತನಗೊಂಡಿದೆ ಎನ್ನಲಾಗಿದೆ.

ಇದೇ ರೀತಿಯ ಘಟನೆ ಪಂಜಾಬ್‍ನಲ್ಲಿ 2018 ರಂದು ನಡೆದಿತ್ತು. ಈಗ ಮತ್ತೆ ತಾಂತ್ರಿಕ ದೋಷದಿಂದ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‍ನಲ್ಲಿ ವಿಮಾನ ಪತನಗೊಂಡ ದುರ್ಘಟನೆ ನಡೆದಿದೆ.

ಭಾರತೀಯ ವಾಯುಪಡೆ ಮಂಗಳವಾರ ಪಾಕ್ ಉಗ್ರರ ಕ್ಯಾಂಪ್‍ಪನ್ನು ನಾಶ ಮಾಡುವುದರ ಮೂಲಕ ಮಿರಾಜ್ ಯುದ್ಧ ವಿಮಾನಗಳು ಸಹಸ ಮೆರೆದ ಬೆನ್ನಲಿಯೆ ಇಂತದೊಂದು ಘಟನೆ ನಡೆದಿದೆ.