ಬೆಂಗಳೂರು(ಫೆ:01): ಬೆಂಗಳೂರಿನ ಹೆಚ್ ಎ ಎಲ್ ಏರ್ಪೋರ್ಟ್ ಬಳಿ ಮಿರಾಜ್ ಯುದ್ಧ ವಿಮಾನ ಪತನಗೊಂಡು ಪೈಲೆಟ್ ಸಾವನ್ನಪ್ಪಿದ್ದಾರೆ. ಈ ವಿಮಾನ ಭಾರೀ ಸದ್ದಿನಿಂದ ಸ್ಪೋಟಗೊಂಡ ಪರಿಣಾಮ ದಟ್ಟವಾದ ಹೊಗೆ ಆವರಿಸಿ ಸ್ಥಳೀಯರಲ್ಲಿ ಗಾಬರಿ ಉಂಟುಮಾಡಿದೆ.

ವಿಮಾನದಲ್ಲಿ ಇಬ್ಬರು ಪೈಲೆಟ್ ಗಳು ಇದ್ದರು,ಬೆಂಕಿಯ ಜ್ವಾಲೆಯಲ್ಲಿ ಓರ್ವ ಪೈಲೆಟ್ ಸಾವನ್ನಪ್ಪಿದ್ದು,ಮೃತ ಪೈಲೆಟ್ ನನ್ನು ಸಿದ್ಧಾರ್ಥ್ ಎಂದು ಗುರುತಿಸಲಾಗಿದೆ. ಹೆಚ್ ಎ ಎಲ್ ಹೊರಭಾಗದಲ್ಲಿನ ಮನೆಗಳ ಮೇಲೆ ಪತನವಾಗುವ ಸಾಧ್ಯತೆ ಇತ್ತು,ಪೈಲೆಟ್ ಗಳ ಸಮಯ ಪ್ರಜ್ಞೆಯಿಂದ ಹೆಚ್ ಎ ಎಲ್ ಕಾಂಪೌಂಡ್ ಒಳಗೆ ಪತನವಾಗಿದೆ ಎನ್ನಲಾಗಿದೆ.