ಬೆಂಗಳೂರು(ಜ:03): ಶೀತಗಾಳಿಯಿಂದಾಗಿ ನಗರದಲ್ಲಿ ತಾಪಮಾನ ಮತ್ತಷ್ಟು ಇಳಿಕೆಯಾಗಿದೆ. ನಗರದಲ್ಲಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದ್ದು ಇನ್ನು ಎರಡು ದಿನಗಳಲ್ಲಿ 10 ಡಿಗ್ರಿ ಗೆ ಇಳಿಯುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಜಾಸ್ತಿಯಾಗುತ್ತದೆ,ಆದರೆ ಈ ವರ್ಷ ಸ್ವಲ್ಪ ತಡವಾಗಿ ಚಳಿ ಕಾಣಿಸಿಕೊಂಡಿದ್ದು ಇನ್ನೂ ಎರಡು ವಾರ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಟ್ಟಾರೆ ಬೆಂಗಳೂರಿನಲ್ಲಿ ಸರಾಸರಿ ಕನಿಷ್ಠ ತಾಪಮಾನ 12 ಡಿಗ್ರಿ ಹಾಗೂ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಎಂದು ದಾಖಲಾಗಿದೆ.