ಬೆಂಗಳೂರು(ಜು:13): ಆಟ-ಗಲಾಟ ಸಂಸ್ಥೆಯ ಆಶ್ರಯದಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ದ ನಾಲ್ಕನೇ ಆವೃತ್ತಿ ಜುಲೈ 20 ಮತ್ತು 21ರಂದು ಹೋಟೆಲ್ ತಾಜ್ ವೆಸ್ಟೆಂಡ್‍ ಹೋಟೆಲ್ ನಲ್ಲಿ ನಡೆಯಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಗದ್ಯ ಮತ್ತು ಹಾಡಿನ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ದೇಶ-ವಿದೇಶಗಳಿಂದ ಹಳೆಯ ಮತ್ತು ಹೊಸ ತಲೆಮಾರಿನ ಬಹುಭಾಷಾ ಕವಿಗಳು, ಗೀತ ರಚನೆಕಾರರು, ಹಾಡುಗಾರರು, ಸಂಗೀತಗಾರರು ಭಾಗವಹಿಸಲಿದ್ದಾರೆ.‌ ಎರಡು ದಿನಗಳ ಈ ಉತ್ಸವ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ.

ದೇಶದ ಹಲವೆಡೆಯಿಂದ ಬರುವ 100ಕ್ಕೂ ಹೆಚ್ಚು ಕವಿಗಳು ಕವಿತೆಗಳನ್ನು ವಾಚನ ಮಾಡಲಿದ್ದಾರೆ. ಉತ್ಸವವು ಕವಿತೆ, ಸಂವಾದ, ಭಾಷಣಗಳು, ಕಾರ್ಯಾಗಾರಗಳನ್ನು ಒಳಗೊಂಡಿವೆ. ಕನ್ನಡದ ಕಾವ್ಯ ಗೋಷ್ಠಿಗಳೂ ನಡೆಯಲಿವೆ ಎಂದು ಶ್ರೀದೇವಿ ರಾವ್ ಹೇಳಿದ್ದಾರೆ.