ಮುಂಬೈ(ಜ:೦೪): ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಫಾರ್ಚುನ್ ಜೈಂಟ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್ ನ ಆರನೇ ಆವೃತ್ತಿಯಲ್ಲಿ ಫೈನಲ್ ತಲುಪಿವೆ.

ಈ ಫೈನಲ್ ಹಣಾಹಣಿ ಶನಿವಾರ ನಡೆಯಲಿದ್ದು,ಉಭಯ ತಂಡಗಳ ಸೆಣೆಸಾಟ ಬಹಳ ಕುತೂಹಲ ಮೂಡಿಸಿದೆ.

ಗುರುವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್, ಯು.ಪಿ ಯೋಧಾ ತಂಡವನ್ನು ೩೮-೩೧ ಪಾಯಿಂಟ್ಸ್ ಗಳಿಂದ ಪರಾಭವಗೊಳಿಸಿ ಫೈನಲ್ ತಲುಪಿದೆ .

ಗೆಲುವಿನ ನಿರೀಕ್ಷೆಯಲ್ಲಿರುವ ಉಭಯ ತಂಡಗಳು ಪ್ರಶಸ್ತಿಗಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿವೆ.