ಮೈಸೂರು(ಜೂನ್.07) ಕಳೆಯ ಕೆಲವು ತಿಂಗಳುಗಳ ಹಿಂದೆ ಬೇಸಿಗೆಯ ಬಿಸಿಲಿಗೆ ಬಳಲಿ ಒಣಗಿ ಬರಡಾಗಿದ್ದ ಬಂಡೀಪುರ ಅರಣ್ಯ ಇತ್ತೀಚೆಗೆ ಸುರಿದ ಮಳೆಯಿಂದ ಹಸಿರಿನಿಂದ ಕಂಗೊಳಿಸುತ್ತಿದೆ.

ಬಂಡೀಪುರ ಅಭಯಾರಣ್ಯ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಹಸಿರಿನಿಂದ ಹಸನವಾಗಿದೆ. ಬೇಸಿಗೆಯ ಬಿಸಿಲಿನಿಂದ ಬತ್ತಿ ಹೋಗಿದ್ದ ಅರಣ್ಯದ ಕೆರೆಗಳು ತುಂಬಿಕೊಂಡಿವೆ. ರಸ್ತೆಗಳ ಬದಿ ಮತ್ತು ಸಫಾರಿ ವಲಯಗಳಲ್ಲಿ ಪ್ರವಾಸಿಗರಿಗೆ ನೋಡಲು ಸಾಕಷ್ಟು ಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ.

ಅರಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಸಫಾರಿ ವಲಯದಲ್ಲಿ ವನ್ಯಜೀವಿಗಳು ಕಂಡುಬರುತ್ತಿವೆ. ಕಾಡೆಮ್ಮೆ, ಜಿಂಕೆ, ಕರಡಿ, ಆನೆಗಳು ಚಿರತೆ ಮತ್ತು ಹುಲಿಗಳು ಸಹ ಕಂಡುಬರುತ್ತಿವೆ. ಅನೇಕ ಪ್ರವಾಸಿಗರು ಸಫಾರಿಗೆ ಹೊರಟು, ಅನೇಕ ಪ್ರಾಣಿ ಮತ್ತು ಪಕ್ಷಿಗಳ ಪೋಟೋಗಳನ್ನು ತೆಗೆಯುವುದರ ಮೂಲಕ ಸಂತಸ ಪಡುತ್ತಿದ್ದಾರೆ.

ಸಾಕಷ್ಟು ಮಳೆ ಆಗಿದ್ದರಿಂದ ಪಕ್ಷಿಗಳು ಸಹ ಸಾಕಷ್ಟು ವಲಸೆ ಬರುತ್ತಿವೆ. ಅರಣ್ಯವು ಹಸಿರು ಹುಲ್ಲು, ಮೇವು ಬೆಳೆಯುವುದರ ಮೂಲಕ ಹಸಿರಿನಿಂದ ತುಂಬಿದ್ದು. ಪ್ರವಾಸಿಗರು ಅಧಿಕ ಪ್ರಮಾಣದಲ್ಲಿ ಅರಣ್ಯ ವಿಕ್ಷಿಸಲು ಆಗಮಿಸುತ್ತಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.