ನವದೆಹಲಿ(ಜ.23): ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಕಮಿಷನ್ ದೇಶಾದ್ಯಂತ ಪಬ್ಜಿ ಆಟ ನಿಷೇಧ ಕುರಿತು ಶಿಫಾರಸ್ಸು ಮಾಡಿದೆ ಎಂದು ಗುಜರಾತ್ ಮಕ್ಕಳ ಹಕ್ಕುಗಳ ಮಂಡಳಿಯ ಅಧ್ಯಕ್ಷ ಜಾಗ್ರತಿ ಪಾಂಡ್ಯ ಹೇಳಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಗುಜಾರಾತ್ ರಾಜ್ಯ ಆಯೋಗ ಶಿಫಾರಸು ಮಾಡಿದ ಬಳಿಕ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ಈ ಆಟಕ್ಕೆ ಗೀಳು ಆಗಿದ್ದು. ಈ ನಿಟ್ಟಿನಲ್ಲಿ ನಿಷೇಧ ಅಗತ್ಯವಿತ್ತು ಮತ್ತು ಇದು ಅವರ ಅಧ್ಯಯನದ ಮೇಲೆ ಪ್ರತಿಕೂಲ ಪರಿಣಾಮ ಬೀಳಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕಮಿಷನ್ ಎಲ್ಲಾ ರಾಜ್ಯಗಳಿಗೂ ಪತ್ರವನ್ನು ಕಳುಹಿಸಿದ್ದು ಆಟವನ್ನು ನಿಷೇದಿಸುವಂತೆ ಸೂಚಿಸಲಾಗಿದೆ. ಎಲ್ಲಾ ರಾಜ್ಯಗಳು ಇದನ್ನು ಜಾರಿಗೊಳಿಸಬೇಕು. ಈ ಆಟದಲ್ಲಿ ದುಷ್ಪರಿಣಾಮ ಹೆಚ್ಚಿರುವ ಕಾರಣ ಆಟವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದ್ದೇವೆ ಎಂದು ಪಾಂಡ್ಯ ಹೇಳಿದ್ದಾರೆ.