ಬೆಂಗಳೂರು(ಆ:19): ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ಅವರ ಹೊಸ ಸಿನಿಮಾದ ಮಾಹಿತಿಯೊಂದು ಹೊರಬಿದ್ದಿದೆ.

ವಿಶೇಷವೆಂದರೆ, ಈ ಹೊಸ ಚಿತ್ರದ ಮುಹೂರ್ತ ಇದೇ ತಿಂಗಳ 23 ರಂದು ನಡೆಯುತ್ತಿದ್ದು, ಚಿತ್ರಕ್ಕೆ ‘ಬಡವ ರಾಸ್ಕಲ್’ ಎಂಬ ಶೀರ್ಷಿಕೆ ಮಾಡಲಾಗಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಧನಂಜಯ್ ಸಹ ನಿರ್ಮಾಪಕರೂ ಆಗಿದ್ದಾರೆ.

ಸದ್ಯ ‘ಬಡವ ರಾಸ್ಕಲ್’ ಶೀರ್ಷಿಕೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಅಮೃತಾ ನಾಯಕಿಯಾಗಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಚಿತ್ರದ ಕುರಿತಂತೆ ಚಿತ್ರತಂಡದವರು ಸದ್ಯದಲ್ಲಿಯೇ ಮತ್ತಷ್ಟು ಮಾಹಿತಿಗಳನ್ನು ನೀಡಲಿದ್ದಾರೆ.