ಬೆಂಗಳೂರು(ಮಾ:15): ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಕನ್ನಡ ಸಿನೆಮಾ ಹಾಡನ್ನು ಹಾಡುವ ಮೂಲಕ ಕನ್ನಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ವಯಸ್ಸಿನಲ್ಲೂ ಕೈ ತುಂಬಾ ಸಿನಿಮಾಗಳನ್ನಿಟ್ಟುಕೊಂಡಿರುವ ಆಂಗ್ರಿ ಯಂಗ್ ಮ್ಯಾನ್ ಕನ್ನಡ ಚಿತ್ರಕ್ಕೆ ಧ್ವನಿಯಾಗಿದ್ದು ಹೆಮ್ಮೆಯ ವಿಚಾರವೇ ಸರಿ.

ಇವರ ಕಂಠಸಿರಿಯಲ್ಲಿ ಮೂಡಿಬಂದ ಕನ್ನಡದ ಹಾಡು ‘ಬಟರ್ ಫ್ಲೈ’ ಎಂಬ ಸಿನಿಮಾದ್ದಾಗಿದೆ. ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರದ ಹಾಡಿಗೆ ಬಚ್ಚನ್ ಧ್ವನಿಯಾಗಿದ್ದಾರೆ. ಚಿತ್ರದ ಪ್ರಮುಖ ಹಾಡನ್ನು ಬಚ್ಚನ್ ಬಳಿ ಹಾಡಿಸಿರುವ ಚಿತ್ರತಂಡ, ಕನ್ನಡ ಹಾಗೂ ಇಂಗ್ಲಿಷ್ ಮಿಶ್ರಣಗೊಂಡಿರುವ ಹಾಡು ಇದಾಗಿದೆ. ಈ ಹಾಡಿಗೆ ಖ್ಯಾತ ರಂಗಭೂಮಿ ದಿಗ್ಗಜ ಮಾಸ್ಟರ್ ಹಿರಣ್ಣಯ್ಯ ಸಾಹಿತ್ಯ ಬರೆದಿದ್ದು,ಗಾಯಕಿ ವಿದ್ಯಾ ವೋಕ್ಸ್ ಅಮಿತಾಭ್ ಗೆ ಸಾಥ್ ನೀಡಿದ್ದಾರೆ.