ಉಡುಪಿ(ನ.20) ಗೋಮಾಂಸ ಸೇವನೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಗೋಮಾಂಸದ ಬದಲು ಕತ್ತೆ, ನಾಯಿ, ಕೋಣದ ಮಾಂಸವನ್ನು ಬೇಕಾದರೂ ತಿನ್ನಿ. ಎಂದು ಬಾಬಾ ರಾಮದೇವ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಉಡುಪಿಯ ಸಂತರ ಸಮಾವೇಶದಲ್ಲಿ ಭಾಗವಹಿಸಿದ ಬಾಬಾ ರಾಮದೇವ್ ಅವರು ಬಹುಜನ ಸಮಾಜವಾದಿ ಪಕ್ಷದವರು ತಮ್ಮನ್ನು ದೇಶದ ಮೂಲ ನಿವಾಸಿಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬ್ರಾಹ್ಮಣರು ಸೇರಿದಂತೆ ಬೇರೆಯ ವಿದೇಶಿ ಮೂಲದವರು ಎಂದು ನಿಂದಿಸುತ್ತಿದ್ದಾರೆ. ಭಾರತದಲ್ಲಿರುವ ಪ್ರಿಯೊಬ್ಬ ವ್ಯಕ್ತಿಯು ದೇಶದ ಮೂಲ ನಿವಾಸಿಗಳು ಎಂಬ ಸತ್ಯವನ್ನು ಅರಿಯಬೇಕಿದೆ ಎಂಬ ಹೇಳಿಕೆಯನ್ನು ನೀಡಿದರು.

ದೇಶದಲ್ಲಿ ಜನಸಂಖ್ಯೆಯು ಮಿತಿಮೀರುತ್ತಿದೆ, ದೇಶದ ಜನ ಮಿತಿ ಇಲ್ಲದೇ ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ. ದೇಶವು ಸಮೃದ್ಧವಾಗಿರಬೇಕಾದರೇ, ವಿಕಾಸದ ಹಾದಿಯಲ್ಲಿ ನಡೆಯಬೇಕಾಗುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣವಾದ ಕಾನೂನು ಕ್ರಮವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು, ಗೋಮಾಂಸ ಸೇವೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದರ ಬದಲು ಕತ್ತೆ, ನಾಯಿ, ಕೋಣದ ಮಾಂಸವನ್ನು ಬೇಕಾದರೂ ತಿನ್ನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.