ಬೆಂಗಳೂರು:(ಜೂನ್06): ದಲಿತ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಕೊಟ್ಟಿಲ್ಲ ಎಂಬ ಆರೋಪಕ್ಕೆ ಬಿಜೆಪಿ ರಾಜಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ನಿಮಗೆ ತಾಕತ್ತಿದ್ದರೆ ಡಾ.ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ ಎನ್ನುವುದರ ಜೊತೆಗೆ ರಾಜ್ಯದ ಮೀಸಲಿ ಕ್ಷೇತ್ರದಿಂದ 7 ಮಂದಿ ಸಂಸದರು ಆಯ್ಕೆಗೊಂಡಿದ್ದು, ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವುದು ನಮ್ಮ ಜವಬ್ದಾರಿ ಎಂದಿದ್ದಾರೆ.

ಈಗಾಗಲೇ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ನಾನು ಮತ್ತು ಸದಾನಂದಗೌಡರು ಚರ್ಚೆ ನಡೆಸಿದ್ದೇವೆ ಎಂದು ಹೇಳುವುದರ ಜೊತೆಗೆ ತಾಕತ್ತಿದ್ದರೆ ಡಾ.ಜಿ. ಪರಮೇಶ್ವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.