ನವದೆಹಲಿ:(ಫೆ20): ಅಯೋಧ್ಯೆ ರಾಮಜಮ್ನ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಫೆ26 ರಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ.

ಜನವರಿ 29 ರಂದೆ ವಿಚಾರಣೆ ನಡೆಸಲಾಗುವುದು ಎನ್ನಲಾಗಿತ್ತು. ಆದರೆ ಜಸ್ಟೀಸ್ ಬೊಬ್ಡೆ ಅವರು ಅನುಪಸ್ಥಿತಿಯಲ್ಲಿದ್ದ ಕಾರಣ ವಿಚಾರಣೆಯನ್ನು ಮುಂದೂಡಲಾಗಿತ್ತು.

ಈಗ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದಲ್ಲಿ ಪಂಚ ನ್ಯಾಯ ಮೂರ್ತಿಗಳ ಸದಸ್ಯ ಪೀಠದಲ್ಲಿ ಫೆ 26 ಮಂಗಳವಾರ ಬೆಳಗ್ಗೆ 10,30 ತಕ್ಕೆ ವಿಚಾರಣೆ ನಡೆಯಲಿದೆ.

ಇನ್ನೇನು ವಿಚಾರಣೆಗೆ ಕೆಲವೇ ದಿನಗಳು ಬಾಕಿಯಿದ್ದು, ವಿಚಾರಣೆಯಲ್ಲಿ ಯಾವ ರೀತಿಯ ತೀರ್ಪು ಹೊರಬೀಳುತ್ತದೆ ಎಂಬುದನ್ನು ಕಾದ್‍ನೋಡ್ಬೇಕಿದೆ.