ಸಿಡ್ನಿ(ಫೆ:07): ದಕ್ಷಿಣ ಆಸ್ಟ್ರೇಲಿಯಾ ಮಹಿಳಾ ತಂಡ ಕೇವಲ 10 ಓವರ್ ಗಳಲ್ಲಿ 10 ರನ್ ಗಳಿಗೆ ಆಲೌಟ್ ಆಗುವ ಮೂಲಕ ಅತ್ಯಂತ ಕಳಪೆ ಪ್ರದರ್ಶನ ನೀಡಿದ ದಾಖಲೆ ಮಾಡಿದೆ. ಆಸ್ಟ್ರೇಲಿಯಾದ ದೇಶಿಯ ಮಹಿಳಾ ಕ್ರಿಕೆಟ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಸೌತ್ ವೇಲ್ಸ್ ವಿರುದ್ಧದ ಪಂದ್ಯದಲ್ಲಿ 10 ಆಟಗಾರ್ತಿಯರು ಡಕೌಟ್ ಆಗಿದ್ದಾರೆ.

ಆರಂಭಿಕ ಆಟಗಾರ್ತಿ ಫೆಬಿ ಮಾನ್ಸೆಲ್ ಒಂದು ಬೌಂಡರಿಯ ಮೂಲಕ 4 ರನ್ ಗಳಿಸಿದ್ದು ಬಿಟ್ಟರೆ,ಉಳಿದ 6 ರನ್ ಇತರೆ ರೂಪದಲ್ಲಿ ದೊರೆತವು. 10.2 ಓವರ್ ಗಳಲ್ಲಿ ತಂಡ 10 ರನ್ ಗಳಿಗೆ ಪತನ ಕಂಡಿತು.ಇದರಿಂದ ದಕ್ಷಿಣ ಆಸ್ಟ್ರೇಲಿಯಾ ಮಹಿಳಾ ತಂಡ ಕ್ರಿಕೆಟ್ ಜಗತ್ತಿನಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡವಾಗಿ ಹೆಸರಾಗಿದೆ.