ನವದೆಹಲಿ (ಫೆ.25): ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಭೀಕರ ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿಕೊಳಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತ ಕೊಡುವ ಶಾಕ್ ಗೆ ಪಾಕ್ ನಡುಗಿ ಹೋಗಿದೆ.

ಹೌದು ಆಮದು ಸುಂಕ ಏರಿಕೆ, ಪಾಕ್‍ಗೆ ನೀರು ಬಿಡುವುದು ನಿಲ್ಲಿಸಿದ್ದು, ಪಾಕ್ ಕಲಾವಿಧರ ನಿಷೇಧ, ಟೊಮೊಟೊ ರಫ್ತು ಸ್ಥಗಿತಗೊಳಿಸಿದ್ದು ಪ್ರಮುಖವಾದುದು. ಇದರ ಪರಿಣಾಮ ಪಾಕ್‍ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಭಾರತದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಟೊಮೆಟೊ ರಫ್ತು ಬಂದ್ ಮಾಡಿದ್ದಕ್ಕೆ ಪ್ರತಿಯಾಗಿ ಅಣು ಬಾಂಬ್ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ಟೊಮೆಟೊ ವಹಿವಾಟು ನಡೆಸುವ ಕೇಂದ್ರ. ಕೋಲಾರದಿಂದ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಬಂದ್ ಮಾಡಲು ಮಾರುಕಟ್ಟೆ ನಿರ್ಧಾರ ಮಾಡಿದೆ. ಈ ಬಗ್ಗೆ ಪಾಕ್ ಆ್ಯಂಕರ್ ಒಬ್ಬರು ಲೈವ್‍ನಲ್ಲಿ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ.

ನಾವು ಈ ಟೊಮಾಟೊವನ್ನು ರಾಹುಲ್ ಹಾಗೂ ಮೋದಿ ಅವರ ಮುಖಕ್ಕೆ ಎಸೆಯುತ್ತೇವೆ. ಭಾರತ ಕೊಳಕು ತುಂಬಿದ ರಾಷ್ಟ್ರ. ಭಾರತಕ್ಕೆ ಉತ್ತರ ಕೊಡುವ ಸಮಯ ಬಂದಿದೆ. ಅಲ್ಲದೆ, ಸಮಯ ಬಂದರೆ ನಾವು ಅಣುಬಾಂಬ್ ದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಆ್ಯಂಕರ್ ಎರಡು ನಿಮಿಷಗಳ ಕಾಲ ಎಲ್ಲಿಯೂ ಬ್ರೇಕ್ ತೆಗೆದುಕೊಳ್ಳದೆ ನಿರಂತರವಾಗಿ ಭಾರತದ ಮೇಲೆ ವಾಗ್ದಾಳಿ ನಡೆಸಿದ್ದಾರೆ