ನವದೆಹಲಿ:(ಫೆ12): ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜುಪೇಯಿ ಅವರ ಭಾವಚಿತ್ರ ಅನಾವರಣಗೊಳ್ಳುತ್ತಿದೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಪಾರ್ಲಿಮೆಂಟ್ಸ್ ಪೋಟ್ರೇಟ್ ಸಮಿತಿಯಲ್ಲಿ ವಾಜುಪೇಯಿ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಅನಾವರಣ ಗೊಳಿಸುವ ನಿರ್ಧಾರ ತೆಗೆದು ಕೊಳ್ಳಲಾಗಿತ್ತು.

ಇಂದು ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜುಪೇಯಿ ಅವರ ಭಾವ ಚಿತ್ರವನ್ನು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅನಾವರಣ ಮಾಡಲಿದ್ದಾರೆ. ಈ ಭಾವ ಚಿತ್ರವನ್ನು ವರ್ಣ ಚಿತ್ರಕಾರ ಕೃಷ್ಣ ಕನ್ಹಾಯ್ ಬಿಡಿಸಿ ಸಿದ್ಧಮಾಡಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ವಿವಿಧ ಪಕ್ಷದ ರಾಜಕೀಯ ನಾಯಕರು ಭಾಗವಹಿಸಲ್ಲಿದ್ದಾರೆ.